ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮೂಡಿಸಲು ನಾನೇ ಸತ್ತೆ ಎನ್ನುವಂಥ ಸ್ಟಂಟ್ ಮಾಡಿದ್ದ ನಟಿ ಪೂನಮ್ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಲಿ ಕಾಶಿಪ್ ಎನ್ನುವ ವಕೀಲರು ದೂರು ನೀಡಿದ್ದು, ದೂರಿನ ಅನ್ವಯ ಮ್ಯಾನೇಜರ್ ಹಾಗೂ ಪೂನಮ್ ಮೇಲೆ ಎಫ್‌ಐಆರ್ ದಾಖಲಾಗಿದೆ.
ನನ್ನ ತಾಯಿಗೆ ಗಂಟಲು ಕ್ಯಾನ್ಸರ್ ಇದೆ, ಅವರು ಪಟ್ಟ ಕಷ್ಟವನ್ನು ಕಣ್ಣಾರೆ ನೋಡಿದ್ದೇನೆ. ಈ ಕಾರಣದಿಂದಾಗಿ ಅರಿವು ಮೂಡಿಸಲು ನಿರ್ಧರಿಸಿದ್ದೆ. ನಾನೇ ಬಲಿಯಾದೆ ಎಂದು ಹೇಳಿದ ನಂತರ ಎಷ್ಟು ಜನ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ತಿಳಿದುಕೊಂಡಿದ್ದಾರೆ ಎನ್ನುವ ಬಗ್ಗೆಯೂ ಆಲೋಚಿಸಿ ಎಂದು ಪೂನಮ್ ಮನವಿ ಮಾಡಿದ್ದಾರೆ.