ಕುಡಿದು ಬಾರ್‌ನಲ್ಲಿ ಗಲಾಟೆ: ಕನ್ನಡ ಕಿರುತೆರೆ ನಟನ ವಿರುದ್ಧ ಎಫ್​​ಐಆರ್​ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿನೆಮಾ ಮತ್ತು ಧಾರವಾಹಿಗಳ ನಟ ನಟಿಯರು ಏನಾದರು ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಕನ್ನಡದ ಕಿರುತೆರೆ ನಟನೊಬ್ಬ
ಬಾರ್​​ನಲ್ಲಿ ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡು ಕಿರಿಕ್​ ಮಾಡಿಕೊಂಡಿದ್ದಾರೆ.

ನಟನ ವಿರುದ್ಧ ಈಗ ಬೆಂಗಳೂರಿನ ಆರ್​ಆರ್​ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿರುತೆರೆ ನಟನ ಹೆಸರು ಪ್ರಜ್ವಲ್, ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತ ವರ್ಷಿಣಿ ಧಾರವಾಹಿಯಲ್ಲಿ ಅಭಿನಯಿಸಿದ್ದರು. ಹಾಗೆಯೇ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ-ತಂಗಿ ಧಾರಾವಾಹಿಯಲ್ಲಿ ಇವರು ಕಾಣಿಸಿಕೊಳ್ಳುತ್ತಿದ್ದಾರೆ.

ಮೂರು ದಿನಗಳ ಹಿಂದೆ ಪ್ರಜ್ವಲ್​ ಆರ್​ಆರ್​ ನಗರದಲ್ಲಿರುವ ಅಮೃತಾ ಬಾರ್ ಅಂಡ್ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದರು. ಅಲ್ಲಿ ತಮ್ಮ ಸ್ನೇಹಿತರೊಂದಿಗೆ ಕುಡಿಯುತ್ತ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಚೇತನ್​ ಎಂಬುವರು ಪ್ರಜ್ವಲ್ ಜೊತೆಗೆ ಇದ್ದ ಮನು ಎಂಬಾತನನ್ನು ಕರೆದಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಪ್ರಜ್ವಲ್​ ಕೂಗಾಡಿದ್ದಾರೆ. ಪ್ರಜ್ವಲ್ ಮತ್ತು ಅವರ ಸಂಗಡಿಗರು ಸೇರಿ ಚೇತನ್ ಮೇಲೆ ಹಲ್ಲೆ ನಡೆಸಿದ್ದಾರೆ. ಚೇತನ್ ಅವರು ನೀಡಿದ ದೂರನ್ನು ಆಧರಿಸಿ, ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!