ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಪೇಪರ್ ಉತ್ಪನ್ನಗಳ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.
ಚಿಕ್ಕಪೇಟೆಯ ಸೇತುರಾವ್ ರಸ್ತೆಯಲ್ಲಿರುವ ಬಾಲಾಜಿ ಪ್ಲಾಸ್ಟಿಕ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಮೂರನೇ ಮಹಡಿ ಸುಟ್ಟು ಭಸ್ಮವಾಗಿದೆ. ಇಲ್ಲಿ ಪೇಪರ್ ಪ್ಲೇಟ್ ಮತ್ತು ಪೇಪರ್ ಗ್ಲಾಸ್ ತಯಾರಿಸಲಾಗುತ್ತಿತ್ತು.
ಬೆಂಕಿಯ ಪರಿಣಾಮವಾಗಿ, ಕಟ್ಟಡದಲ್ಲಿ ಅನೇಕ ವಸ್ತುಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.