ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನ ಬಾಗ್ ಲಿಂಗಂಪಲ್ಲಿ ವಿಎಸ್‌ಟಿ ಬಳಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಡೆಕೋರೇಟಿವ್ ಐಟಮ್ಸ್ ಸುಟ್ಟು ಭಸ್ಮವಾಗಿವೆ. ಇದರಲ್ಲಿ ಸಮಾರಂಭಗಳಿಗೆ ಬಳಸುವ ಅಲಂಕಾರಿಕ ವಸ್ತುಗಳನ್ನು ಇಡಲಾಗಿದ್ದು, ಸುತ್ತ ಮುತ್ತ ದಟ್ಟ ಹೊಗೆ ಆವರಿಸಿತ್ತು.
ಅಪಘಾತದ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇದರಿಂದ ಆ ಭಾಗದ ಬಸ್ತಿ ನಿವಾಸಿಗಳು ಭಯಭೀತರಾಗಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.
ಸಿಕಂದರಾಬಾದ್‌ನ ದಕ್ಕನ್ ಮಾಲ್‌ನಲ್ಲಿ ಇತ್ತೀಚೆಗೆ ನಡೆದ ಬೆಂಕಿ ಅವಘಡ ಮಾಸುವ ಮುನ್ನವೇ ಮತ್ತೆ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಸಿಕಂದರಾಬಾದ್‌ನಲ್ಲಿ ನಡೆದ ಅಪಘಾತದ ನಂತರವೂ ಹೈದರಾಬಾದ್‌ನ ಹಲವೆಡೆ ಬೆಂಕಿ ಅವಘಡಗಳು ಸಂಭವಿಸಿವೆ ಎಂದು ತಿಳಿದಿದೆ. ಕಟ್ಟಡಗಳ ಮಾಲೀಕರು ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳದಿರುವುದು ಇದಕ್ಕೆ ಕಾರಣ ಎನಿಸುತ್ತಿದೆ.