Wednesday, October 29, 2025

ಯಲಚೇನಹಳ್ಳಿಯಲ್ಲಿ ಬೆಂಕಿ ಅವಘಡ: 19 ಇವಿ ಬೈಕ್‌ಗಳು ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡದಲ್ಲಿ ಬೆಳಗ್ಗೆ 7 ಗಂಟೆಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಪಾರ್ಕಿಂಗ್‌ನಲ್ಲಿ ಚಾರ್ಜ್ ಆಗುತ್ತಿದ್ದ 19 ಇವಿ ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಬರುವ ವೇಳೆ ಬೇಸ್‌ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳು ಇದ್ದುದರಿಂದ ಸಂಭವಿಸಿದ ಸಣ್ಣ ಬ್ಲಾಸ್ಟ್‌ ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದೆ.

ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಪ್ರಾಥಮಿಕ ಪರಿಶೀಲನೆ ಪ್ರಕಾರ, ಬೇಸ್‌ಮೆಂಟ್‌ನಲ್ಲಿ ಇವಿ ಬೈಕ್‌ಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಓವರ್‌ಹೀಟ್‌ ಆಗಿದ್ದ ಒಂದು ಬೈಕ್‌ ಗೆ ಬೆಂಕಿ ತಗುಲಿದೆ. ಈ ಬೆಂಕಿ ಹತ್ತಿರದ ಇತರ ಬೈಕ್‌ಗಳಿಗೆ ಹರಡಿದ್ದು, ಗ್ಯಾಸ್ ಸಿಲಿಂಡರ್‌ಗಳಲ್ಲಿ ಸೋರಿಕೆಯು, ಒಂದು ಸಿಲಿಂಡರ್ ಬ್ಲಾಸ್ಟ್‌ ಆಗಲು ಕಾರಣವಾಯಿತು. ಸ್ಥಳೀಯರು ಮತ್ತು ಸಿಬ್ಬಂದಿ ತಕ್ಷಣ ತುರ್ತು ಕ್ರಮ ಕೈಗೊಂಡು ಬೆಂಕಿಯನ್ನು ನಿಯಂತ್ರಿಸಿದ್ದಾರೆ.

ಸ್ಥಳೀಯರು ಬೆಳಗಿನ ಹೊತ್ತಿನಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ನೋಡಿ ಆತಂಕಗೊಂಡು. ಅಗ್ನಿಶಾಮಕ ಇಲಾಖೆ ಫೋನ್ ಮಾಡಿದ್ದು, ಎರಡು ಫೈರ್ ಎಂಜಿನ್‌ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಜೀವಹಾನಿ ಸಂಭವಿಸದಿದ್ದರೂ, ಪಾರ್ಕಿಂಗ್‌ನಲ್ಲಿ ಇತರ ವಾಹನಗಳಿಗೆ ಹಾನಿ ಉಂಟಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!