ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಗುಂಡಿನ ದಾಳಿಗಳು ದಿನೇ ದಿನೇ ವರದಿಯಾಗುತ್ತಲೇ ಇವೆ. ಭಾನುವಾರ ಚಿಕಾಗೋದ ನೈಟ್ ಕ್ಲಬ್ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿವೆ.
ಭಾನುವಾರ ಚಿಕಾಗೋದ ಇಂಡಿಯಾನಾ ನೈಟ್ ಕ್ಲಬ್ ನಲ್ಲಿ ಗುಂಡು ಮೊರೆತದ ಸದ್ದು ಮೊಳಗಿದ್ದು ಪ್ರವೇಶ ದ್ವಾರದ ಬಳಿಯಿದ್ದ 34 ವರ್ಷದ ವ್ಯಕ್ತಿ ಹಾಗೂ ಒಳಗಡೆಯಿದ್ದ 26 ವರ್ಷದ ಮಹಿಳೆ ಸಾವೀಗೀಡಾಗಿದ್ದಾರೆ. ಇನ್ನೂ ನಾಲ್ವರು ಗುಂಡಿನೇಟಿನಿಂದ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಗುಂಡಿನ ದಾಳಿ ನಡೆದ ಕಾರಣ ಮತ್ತು ಆರೋಪಿಯ ಹೆಸರನ್ನು ಇನ್ನೂ ಬಹಿರಂಗ ಪಡಿಸಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲೀಸರು ಹೇಳಿದ್ದಾರೆಂದು ಮೂಲಗಳು ವರದಿ ಮಾಡಿವೆ.