ಪವನ್‌ ಕಲ್ಯಾಣ್‌ ಪುತ್ರನ ಶಾಲೆಯಲ್ಲಿ ಅಗ್ನಿ ಅವಘಡ; ಮಾರ್ಕ್‌ಗೆ ತೀವ್ರ ಸುಟ್ಟ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್ ಪುತ್ರನಿಗೆ ಅವಘಡವೊಂದರಲ್ಲಿ ಗಾಯಗಳಾಗಿವೆ. ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್ ಶಂಕರ್ ಕಲಿಯುತ್ತಿರುವ ಶಾಲೆಯಲ್ಲಿ ನಡೆದ ಬೆಂಕಿ ಅವಘಡ ನಡೆದಿದ್ದು, ಮಾರ್ಕ್​ಗೆ ತೀವ್ರ ಸುಟ್ಟ ಗಾಯಗಳಾಗಿವೆ ಎನ್ನಲಾಗುತ್ತಿದೆ. ‌

ಪವನ್ ಕಲ್ಯಾಣ್ ಕಿರಿಯ ಪುತ್ರ ಮಾರ್ಕ್, ಸಿಂಗಪುರದ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅವರ ಪತ್ನಿಯೂ ಸಹ ಸಿಂಗಪುರದಲ್ಲಿಯೇ ನೆಲೆಸಿದ್ದಾರೆ. ಪವನ್ ಕಲ್ಯಾಣ್ ಅವರು ಆಗಾಗ್ಗೆ ಸಿಂಗಪುರಕ್ಕೆ ಹೋಗಿ ಬರುತ್ತಿರುತ್ತಾರೆ. ಇತ್ತೀಚೆಗೆ ಮಾರ್ಕ್ ಶಂಕರ್ ಕಲಿಯುತ್ತಿದ್ದ ಶಾಲೆಯಲ್ಲಿ ಬೆಂಕಿ ಅವಘಡ ನಡೆದಿದ್ದು, ಅವಘಡದಲ್ಲಿ ಮಾರ್ಕ್​ರ ಕಾಲು, ಬೆನ್ನು, ಕೈಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇದರ ಜೊತೆಗೆ ಅತಿಯಾದ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆಯೂ ಸಹ ಮಾರ್ಕ್​ಗೆ ಕಾಣಿಸಿಕೊಂಡಿದ್ದು, ಮಾರ್ಕ್ ಶಂಕರ್ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೇವಾ ಅವರಿಗೆ ಇಬ್ಬರು ಮಕ್ಕಳು ಮಾರ್ಕ್ ಶಂಕರ್ ಮತ್ತು ಪೊಲೇನಾ ಅಂಜನಾ. ಈ ಇಬ್ಬರೂ ಸಹ ಸಿಂಗಪುರದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಶಾಲೆ ಕಲಿಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!