ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ಖಾನೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿರುವ ಘಟನೆ ದೆಹಲಿ ಸಮೀಪ ನಡೆದಿದೆ. ಸೋಮವಾರ ಬೆಳಗ್ಗೆ ನಿಲೋತಿ ಗ್ರಾಮದ ಕಾರ್ಖಾನೆಯಲ್ಲಿ ಉಂಟಾದ ಬೆಂಕಿ ಅವಘಡ ಎದೆ ಝಲ್ ಎನಿಸುವಂತಿದೆ. ಬೆಂಕಿಯ ಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ದೃಶ್ಯಗಳು ವೈರಲ್ ಆಗಿವೆ. ದಟ್ಟ ಹೊಗೆ ಇಡೀ ಗ್ರಾಮವನ್ನು ಆವರಿಸಿತ್ತು.
ಮಾಹಿತಿ ಪಡೆದ ಕೂಡಲೇ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು.
ಆದರೆ, ಘಟನೆಯಲ್ಲಿ ಇದುವರೆಗೆ ಯಾವುದೇ ಗಾಯ ಅಥವಾ ಸಾವು ನೋವು ಸಂಭವಿಸಿಲ್ಲ. ಅವಘಡ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ತನಿಖೆ ನಡೆಯುತ್ತಿದೆ.
#WATCH | Delhi: Fire breaks out in a factory in Nilothi village, 10 fire tenders rushed to the spot. No injuries to anyone so far: Delhi Fire Service
(Video source – Delhi Fire Service) pic.twitter.com/dm3jX4KWvZ
— ANI (@ANI) August 21, 2023