ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಢಾಕಾದಲ್ಲಿ ಆರು ಅಂತಸ್ತಿನ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು, 43 ಜನರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಢಾಕಾದ ಸಿಟಿ ಸೆಂಟರ್‌ನಲ್ಲಿರುವ ಗ್ರೀನ್ ಕೋಜಿ ಕಾಟೇಜ್ ಶಾಪಿಂಗ್ ಸೆಂಟರ್‌ನಲ್ಲಿ ಏಕಾಏಕಿ ಬೆಂಕಿ ಆವರಿಸಿದೆ. ಮಾಲ್‌ನ ನೆಲಮಹಡಿಯಲ್ಲಿ ಸಂಭವಿಸಿದ ಬೆಂಕಿಯು ಕಟ್ಟಡದಾದ್ಯಂತ ತ್ವರಿತವಾಗಿ ಹರಡಿದೆ ಎನ್ನಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಗಳ ನಿರಂತರ ಪ್ರಯತ್ನದ ಹೊರತಾಗಿಯೂ, ಬೆಂಕಿಯಿಂದಾಗಿ 43 ಜನರು ಸಾವನ್ನಪ್ಪಿ, ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. ಸಂತ್ರಸ್ತರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೆಂಕಿ ಅನಾಹುತ ಕಾರಣದ ಬಗ್ಗೆ ತನಿಖೆ ಮುಂದುವರಿದಿದ್ದು, ಈ ದುರಂತ ಘಟನೆಗೆ ಕಾರಣವನ್ನು ಶೀಘ್ರದಲ್ಲೇ ಕಂಡುಹಿಡಿಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.