ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದೆ, ಈ ಬಾರಿ ಭಾರತದ ಒಂಬತ್ತು ನಗರಗಳು ವಿಶ್ವಕಪ್ ಆತಿಥ್ಯ ವಹಿಸಿಕೊಂಡಿವೆ. ಅದರಲ್ಲಿ ಕೊಲ್ಕತ್ತಾ ಕೂಡ ಒಂದು.
ವಿಶ್ವಕಪ್ ಪಂದ್ಯ ನಡೆಯಬೇಕಿದ್ದ ಕೊಲ್ಕತ್ತಾದ ಈಡೆನ್ ಗಾರ್ಡನ್ಸ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಡ್ರೆಸ್ಸಿಂಗ್ ರೂಂನ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಬುಧವಾರ ಮಧ್ಯರಾತ್ರಿ ಡ್ರೆಸ್ಸಿಂಗ್ ರೂಮ್ನಲ್ಲಿ ಬೆಂಕಿ ಕಾಣಿಸಿದ್ದು, ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಈಡೆನ್ ಗಾರ್ಡನ್ಸ್ ತಲುಪಿದ್ದಾರೆ. ಬೆಂಕಿಯನ್ನು ನಂದಿಸಲಾಗಿದೆ. ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಹೊತ್ತಿದ್ದು, ರೂಮ್ನಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿವೆ. ಇನ್ನು ಚಾವಣಿಯ ಒಂದು ಭಾಗಕ್ಕೂ ಬೆಂಕಿ ಹೊತ್ತಿದ್ದು, ಅದನ್ನು ಕೆಡವಲಾಗಿದೆ.