ಚಪ್ಪಲಿ ಅಂಗಡಿಗೆ ಬೆಂಕಿ: ಅಪಾರ ಪ್ರಮಾಣದ ವಸ್ತುಗಳು ಭಸ್ಮ

ಹೊಸದಿಗಂತ ವರದಿ ವಿಜಯಪುರ: 

ಚಪ್ಪಲಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ, ಅಪಾರ ಪ್ರಮಾಣದ ವಸ್ತುಗಳು ಭಸ್ಮಗೊಂಡಿರುವ ಘಟನೆ ನಗರದ ಸರಾಫ್‌ ಬಜಾರ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.

ಇಲ್ಲಿನ ಕರ್ನಾಟಕ ಫುಟ್ ವೇರ್ ಅಂಗಡಿಯಲ್ಲಿ ಬೆಳಗಿನ ಜಾವ 4 ಗಂಟೆ ವೇಳೆಗೆ ಬೆಂಕಿ ತಗುಲಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ‌ ನಂದಿಸಿದರು. ಅಲ್ಲದೇ, ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ.

ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!