ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ನಗರದ ಹೊರವಲಯದ ಕೆಐಎಡಿಬಿ ಗ್ರೋತ್ ಸೆಂಟರ್ ಬಳಿಯ ಕಾಟನ್ ಮಿಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿವೆ.
ನಗರದ ಪ್ರತಾಪ್ ರೆಡ್ಡಿ ಎಂಬುವವರಿಗೆ ಸೇರಿದ ಶ್ರೀಶೈಲ ಕಾಟನ್ ಮಿಲ್‌ನಲ್ಲಿ ಘಟನೆ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹತ್ತಿ, ಹರಳೆ, ಹತ್ತಿ ಕಾಳು ಸುಟ್ಟು ಬೂದಿಯಾಗಿವೆ. ರಾಯಚೂರಿನ ಹೈದ್ರಾಬಾದ್ ರಸ್ತೆಯಲ್ಲಿರುವ ಕಾಟನ್ ಮಿಲ್‌ನಲ್ಲಿ ಅಗ್ನಿ ಅವಘಡ ನಡೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರಿನ ಗೋಡೌನ್‌ಗೆ ಆವರಿಸಿದ ಬೆಂಕಿ, ಲಕ್ಷಾಂತರ ರೂ. ಮೌಲ್ಯದ ಹತ್ತಿ ಭಸ್ಮ

