ಬಾಂಗ್ಲಾದೇಶದ ರೈಲಿನ ಬೋಗಿಗಳಲ್ಲಿ ಹೊತ್ತಿದ ಬೆಂಕಿ, ನಾಲ್ವರು ಭಾರತೀಯರು ಸಾವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಬೆನಾಪೋಲ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ಶುಕ್ರವಾರ ತಡರಾತ್ರಿ ಭೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ರೈಲಿನಲ್ಲಿ ಭಾರತೀಯ ಪ್ರಜೆಗಳೂ ಇದ್ದರು ಎಂದು ಹೇಳಲಾಗಿದೆ. ಅವಘಡದಲ್ಲಿ ಸಾಕಷ್ಟು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ.

ಮೃತದೇಹಗಳು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವ ಕಾರಣ ಮೃತರು ಯಾರೆಂದು ಗುರುತಿಸಲು ಆಗಿಲ್ಲ, ಇವರು ಭಾರತೀಯರಾ? ಅಥವಾ ಬಾಂಗ್ಲಾ ಪ್ರಜೆಗಳ ಎನ್ನುವ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

ಜೆಸ್ಸೋರ್‌ನಿಂದ ಢಾಕಾಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿಸಯಿದಾಬಾದ್‌ನ ಗೋಲಬಾಗ್ ತಲುಪುತ್ತಿದ್ದಂತೆಯೇ ಬೆಂಕಿ ಹೊತ್ತಿದೆ. ಪ್ಯಾಸೆಂಜರ್‌ಗಳನ್ನು ರಕ್ಷಿಸುತ್ತಿದ್ದ ಯುವಕ ಕೂಡ ಮೃತಪಟ್ಟಿದ್ದಾನೆ.

ನಾಳೆ ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದನ್ನು ಅಲ್ಲಿಯ ವಿಪಕ್ಷಗಳು ವಿರೋಧಿಸಿವೆ. ಈ ಅಪಘಾತದ ಹಿಂದೆ ವಿಪಕ್ಷಗಳ ಕೈವಾಡ ಇರಬಹುದು ಎನ್ನುವ ಆರೋಪವೂ ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!