ಅಗ್ನಿ ದುರಂತ: ಕುವೈತ್‌ಗೆ ಪ್ರಯಾಣ ಬೆಳೆಸಿದ ಸಚಿವ ಕೀರ್ತಿ ವರ್ಧನ್ ಸಿಂಗ್..!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಗ್ನಿ ದುರಂತದಲ್ಲಿ ಗಾಯಗೊಂಡ ಭಾರತೀಯರ ಪರಿಸ್ಥಿತಿಯನ್ನು ನೋಡಿಕೊಳ್ಳಲು ಮತ್ತು ಸತ್ತವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳಲು ಕುವೈತ್‌ಗೆ ತೆರಳುವ ಮೊದಲು, ಕೆಲವು ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ. ನಾವು ಅಲ್ಲಿಗೆ ತಲುಪಿದ ಕ್ಷಣದಲ್ಲಿ ಉಳಿದ ಪರಿಸ್ಥಿತಿ ಸ್ಪಷ್ಟವಾಗುತ್ತದೆ ಎಂದು ವರ್ಧನ್ ಹೇಳಿದರು.

ಕುವೈತ್‌ಗೆ ತೆರಳುವ ಮೊದಲು ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ನಾವು ಪ್ರಧಾನಿಯವರೊಂದಿಗೆ ನಿನ್ನೆ ಸಂಜೆ ಸಭೆ ನಡೆಸಿದ್ದೇವೆ ಎಂದಿದ್ದಾರೆ.

“ವಾಯುಪಡೆಯ ವಿಮಾನವು ಸ್ಟ್ಯಾಂಡ್‌ಬೈನಲ್ಲಿದೆ. ಶವಗಳನ್ನು ಗುರುತಿಸಿದ ತಕ್ಷಣ, ಸಂಬಂಧಿಕರಿಗೆ ತಿಳಿಸಲಾಗುವುದು ಮತ್ತು ನಮ್ಮ ವಾಯುಪಡೆಯ ವಿಮಾನವು ಶವಗಳನ್ನು ಮರಳಿ ತರುತ್ತದೆ…” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!