ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನ ಪಕ್ಷ ಉಚ್ಛಾಟನೆ ಮಾಡಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೇಳಿ ಬರ್ತಿದೆ. ಇದರ ನಡುವೆ ಮಾಜಿ ಸಚಿವ ಶ್ರೀರಾಮುಲು ಯತ್ನಾಳ ಪರ ನಿಂತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಮಾಜಿ ಸಚಿವ, ಬಿಜೆಪಿ ಪಕ್ಷದಿಂದ ಬಸನಗೌಡ ಪಾಟೀಲ ಯತ್ನಾಳ್ ರನ್ನ ಉಚ್ಛಾಟನೆ ಮಾಡಿದ್ದಾರೆ. ಯತ್ನಾಳ್ ಪಂಚಮಸಾಲಿಯ ಪ್ರಬಲ ರಾಜಕಾರಣಿ ಆಗಿದ್ದು, ಮೋದಿ, ಅಮಿತ್ ಶಾ ಉಚ್ಛಾಟನೆ ಬಗ್ಗೆ ಮರು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ನಾನು ಯತ್ನಾಳ್ ಗೆ ಮೊದಲೇ ಸಾಕಷ್ಟು ಹೇಳಿದ್ದೆ. ನೇರ ನುಡಿ, ಎಲ್ಲವನ್ನೂ ಇದ್ಹಂಗೆ ಮಾತಾಡ್ತೀರಾ, ನಿಮ್ಮ ಮನಸ್ಸಲ್ಲಿ ಕಲ್ಮಶ ಇಲ್ಲ. ಆದ್ರೆ ಇದು ರಾಜಕಾರಣದಲ್ಲಿ ಸರಿಯಲ್ಲ. ಒಳಗೊಂದು, ಹೊರಗೊಂದು ಇರೋರಿಗೆ ರಾಜಕಾರಣ ನೀವು ಬದಲಾಗಿ ಅಂತ ಸಲಹೆ ಕೊಟ್ಟಿದ್ದೆ ಎಂದು ಹೇಳಿದರು.
ಕಟ್ಟಾ ಹಿಂದೂಗಳಿಗೆ ಇದು ನೋವಿನ ವಿಚಾರ ಹೀಗಾಗಿ ಪರಿಶೀಲನೆ ಮಾಡಬೇಕು. ನನಗೂ ಅವಕಾಶ ಸಿಕ್ಕರೆ ನಾನು ದೆಹಲಿಗೂ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಮರು ಪರಿಶೀಲನೆ ಮಾಡ್ಬೇಕು ಎಂದು ಒತ್ತಡ ಹಾಕುತ್ತೇನೆ ಎಂದರು.