ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸುರು ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಂದಿ ಬೇಟೆಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟಿಸಿ ಹಸುವಿನ ಬಾಯಿ ಛಿದ್ರವಾಗಿರುವಂತಹ ಘಟನೆ ನಡೆದಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡಗೆ ಹಸು ಸೇರಿದ್ದು, ಮೇಯಲು ಬಿಟ್ಟಾಗ ಅವಘಡ ಸಂಭವಿಸಿದೆ. ಕಿಡಿಗೇಡಿಗಳಿಂದ ಈ ಕೃತ್ಯ ಶಂಕೆ ವ್ಯಕ್ತವಾಗಿದೆ. ಸದ್ಯ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸಿದೆ. ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚನ್ನನಂಜೇಗೌಡ ಅವರು ಕೆಂಪಿಸಿದ್ದನಹುಂಡಿ ಗ್ರಾಮದ ವಾಟರ್ ಟ್ಯಾಂಕ್ ಬಳಿ ಜಾನುವಾರು ಮೇಯಲು ಬಿಟ್ಟಿದ್ದರು. ಕಾಡು ಹಂದಿ ಬೇಟೆಗೆ ಅದೇ ಜಾಗದಲ್ಲಿ ಸಿಡಿಮದ್ದು ಅಡಗಿಸಿಟ್ಟಿದ್ದರು. ಹಸು ಮೇಯುತ್ತಿದ್ದ ವೇಳೆ ಸಿಡಿಮದ್ದು ಸ್ಫೋಟಗೊಂಡು ಗಾಯಗೊಂಡಿದೆ.
ಖಚಿತ ಮಾಹಿತಿ ಮೇರೆಗೆ ಮಾಂಸ ಸಾಗಾಟ ವಾಹನ ಬೆನ್ನಟ್ಟಿದ್ದ ಪೋಲಿಸರು, ಈ ವೇಳೆ ನಿಯಂತ್ರಣ ತಪ್ಪಿ ಮಾಂಸ ತುಂಬಿಕೊಂಡು ಹೋಗುತ್ತಿದ್ದ ವಾಹನ ಪಲ್ಟಿ ಆಗಿದೆ. ವಾಹನ ಅಲ್ಲೇ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ್ ಠಾಣೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಹುಣಸೂರಿನಲ್ಲಿ ಗೋಹತ್ಯೆ ಮಾಡಿ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಮಾಹಿತಿ ಆಧಾರದ ಮೇಲೆ ಮೈಸೂರು ಪೋಲೀಸರು ಬೆನ್ನಟ್ಟಿದಾಗ ವಾಹನ ಮಗುಚಿ ಬಿದ್ದಿದ್ದು, ಎಫ್ಐಆರ್ ದಾಖಲು ಮಾಡಿ ತನಿಖೆ ಆರಂಭಿಸಿದ ಪೊಲೀಸ್ ಇಲಾಖೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.