SHOCKING | ಬ್ಯಾಗ್ ನಲ್ಲಿದ್ದ ಪಟಾಕಿ ಸ್ಫೋಟ: ವ್ಯಕ್ತಿಯ ದೇಹ ಛಿದ್ರ ಛಿದ್ರ, 6 ಜನರು ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಗ್ ನಲ್ಲಿದ್ದ ಪಟಾಕಿ ಸ್ಫೋಟಗೊಂಡು ವ್ಯಕ್ತಿ ಓರ್ವನ ದೇಹ ಛಿದ್ರ ಛಿದ್ರವಾಗಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ನ ಏಲೂರಿನಲ್ಲಿ ಪಟಾಕಿ ಖರೀದಿಸಿ ಬ್ಯಾಗ್ ನಲ್ಲಿಟ್ಟುಕೊಂಡು ಸ್ಕೂಟರ್ ನಲ್ಲಿ ಇಬ್ಬರು ವ್ಯಕ್ತಿಗಳು ತೆರಳುತ್ತಿದ್ದರು. ಈ ವೇಳೆ ರಸ್ತೆಗುಂಡಿಯಲ್ಲಿ ಸ್ಕೂಟರ್ ಇಳಿದಿದ್ದು, ಸ್ವಲ್ಪ ಜಂಪ್ ಆಗಿದೆ. ಸ್ಕೂಟರ್ ಜಂಪ್ ಆಗಿದ್ದೇ ತಡ ಬ್ಯಾಗ್ ನಲ್ಲಿದ್ದ ಪಟಾಕಿ ಸ್ಫೋಟಗೊಂಡಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿದ್ದ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!