ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಪುರಿಯಲ್ಲಿ ಭಗವಾನ್ ಜಗನ್ನಾಥ ದೇವಾಲಯದಲ್ಲಿ ಚಂದನ್ ಜಾತ್ರಾ ಉತ್ಸವದ ವೇಳೆ ಪಟಾಕಿಯ ಅವಘಡ ಸಂಭವಿಸಿದೆ.
ಪಟಾಕಿ ರಾಶಿಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ 15 ಜನ ಗಾಯಗೊಂಡಿದ್ದು, ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಜಾತ್ರಾ ಉತ್ಸವದ ವೇಳೆ ಭಕ್ತರು ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ರಾಶಿ ಹಾಕಿದ್ದ ಪಟಾಕಿಗೆ ಬೆಂಕಿ ತಗುಲಿದೆ. ಇದು ಸ್ಫೋಟಕ್ಕೆ ಕಾರಣವಾಗಿದೆ.
ಅವಘಡದ ವೇಳೆ ನೂರಾರು ಭಕ್ತರು ಜಲಧಾರೆ ನರೇಂದ್ರ ಪುಷ್ಕರಿಣಿಯ ದಡದಲ್ಲಿ ನಿಂತಿದ್ದರು. ಪಟಾಕಿ ರಾಶಿಗೆ ಬೆಂಕಿ ತಗಲುತ್ತಿದ್ದಂತೆ ಕೆಲವರು ಜೀವ ಉಳಿಸಿಕೊಳ್ಳಲು ನದಿಗೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.