ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ನಿವಾಸದೆದುರು ಗುಂಡಿನ ದಾಳಿ ನಡೆದಿದೆ. ಸಚಿವ ಅಶೋಕ್ ಚೌಧರಿ ಹಾಗೂ ತೇಜಸ್ವಿ ಯಾದವ್ ಮನೆ ಅಕ್ಕಪಕ್ಕದಲ್ಲೇ ಇದೆ. ಗೇಟ್ ಬಳಿ ಯುವಕನ ಮೇಲೆ ಗುಂಡು ಹಾರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದುಷ್ಕರ್ಮಿಗಳು ರಾಹುಲ್ ಎಂಬಾತನ ಮೇಲೆ ಗುಂಡು ಹಾರಿಸಿದ್ದಾರೆ, ದಾಳಿಕೋರರಿಬ್ಬರು ಬೈಕ್ನಲ್ಲಿ ಬಂದಿದ್ದರು.
ದಾಳಿಯ ಬಳಿಕ ರಾಹುಲ್ ಬಳಿ ಇದ್ದ 400 ರೂ. ಕೂಡ ಕಸಿದುಕೊಂಡು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಕೇವಲ ಈ ಇಬ್ಬರ ಮನೆ ಮಾತ್ರವಲ್ಲದೆ ಅಲ್ಲೇ ಆಸುಪಾಸಿನಲ್ಲಿ ಹಲವು ಅಧಿಕಾರಿಗಳು ಹಾಗೂ ನ್ಯಾಯಮೂರ್ತಿಗಳ ಮನೆಗಳು ಕೂಡ ಇವೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.