ದೇಶದಲ್ಲೇ ಮೊದಲ ಪ್ರಯತ್ನ: ತುರ್ತು ಚಿಕಿತ್ಸೆಗೆ ಹೆಲಿಕಾಪ್ಟರ್ ಸೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದಲ್ಲಿ ವೈದ್ಯಕೀಯ ತುರ್ತು ಸಂದರ್ಭದಲ್ಲಿ ತ್ವರಿತ ಚಿಕಿತ್ಸೆಗೆ ಅನುಕೂಲವಾಗುವಂತೆ ಹೆಲಿಕಾಪ್ಟರ್ ಸೇವೆಯನ್ನು (HEMS) ಆರಂಭಿಸಲಾಗುತ್ತಿದ್ದು, ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ.

ಈ ಹೆಲಿಕಾಪ್ಟರ್‌ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆವರಣದಲ್ಲಿ ಇರಲಿದೆ. ಅಪಘಾತ ಅಥವಾ ಇನ್ಯಾವುದೇ ವೈದ್ಯಕೀಯ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ 150 ಕಿ.ಮೀ. ವ್ಯಾಪ್ತಿಯಲ್ಲಿ ಇದು ಹಾರಾಟ ನಡೆಸಲಿದೆ ಎಂದು ಸಿಂಧಿಯಾ ಹೇಳಿದ್ದಾರೆ.

ಉತ್ತರಾಖಂಡ ಜನತೆ ದೇಶದ ಮೊದಲ HEMS ಸೇವೆಯನ್ನು ಪಡೆಯಲಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಆರಂಭಿಸುತ್ತಿರುವ ಈ ಸೇವೆ ರಾಜ್ಯದಿಂದಲೇ ಆರಂಭವಾಗಲಿದೆ’ ಎಂದಿದ್ದಾರೆ.

‘ಯಾವ ಉದ್ದೇಶಕ್ಕಾಗಿ ಹೆಲಿಕಾಪ್ಟರ್ ಬಳಸಲಾಗುತ್ತಿದೆಯೋ ಅದರ ಜೋಡಣೆ ಮತ್ತು ಪ್ರಮಾಣೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದು ನನ್ನ ನಿಗಾದಲ್ಲಿದೆ. ಹೀಗಾಗಿ ಈ ಸಂಪೂರ್ಣ ಯೋಜನೆಯ ಕಾಳಜಿ ಇನ್ನು ಮುಂದೆ ನನ್ನದೇ ಹೊರತು ನಿಮ್ಮದಲ್ಲ’ ಎಂದು ಸಿಂಧಿಯಾ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!