ಮಾಲ್ಡೀವ್ಸ್ ನಲ್ಲಿರುವ ಸೇನಾ ಸಿಬ್ಬಂದಿಗಳ ಮೊದಲ ತಂಡ ಮಾ.10ರ ವೇಳೆಗೆ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಲ್ಡೀವ್ಸ್ ನಲ್ಲಿರುವ ಸೇನಾ ಸಿಬ್ಬಂದಿಗಳ ಮೊದಲ ತಂಡವನ್ನು ಮಾ.10ರ ವೇಳೆಗೆ ವಾಪಸ್ ಕಳಿಸಲಾಗುವುದು. ಉಳಿದ ಸಿಬ್ಬಂದಿಗಳನ್ನು ಮೇ.10 ರ ವೇಳೆಗೆ ವಾಪಸ್ ಕಳಿಸಲಾಗುತ್ತದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಿಳಿಸಿದ್ದಾರೆ.

ಚೀನಾ ಪರ ನಿಲುವು ಹೊಂದಿರುವ ಮುಯಿಝು ಸಂಸತ್ ನಲ್ಲಿ ಈ ಮಾಹಿತಿ ಪ್ರಕಟಿಸಿದ್ದು, ವಿದೇಶಿ ಸೇನಾ ಪಡೆಯ ಇರುವಿಕೆಯನ್ನು ತೆರವುಗೊಳಿಸುವುದು, ದೇಶ ಕಳೆದುಕೊಂಡಿರುವ ಸಾಗರ ಪ್ರದೇಶವನ್ನು ಹಿಂಪಡೆಯುವ ನಿರೀಕ್ಷೆಗಳೊಂದಿಗೆ ತಮ್ಮ ಸರ್ಕಾರವನ್ನು ಮಾಲ್ಡೀವ್ಸ್ ನ ಬಹುಸಂಖ್ಯೆಯ ಜನರು ತಮ್ಮ ಆಡಳಿತವನ್ನು ಬೆಂಬಲಿಸಲಿದ್ದಾರೆ ಎಂದು ಮುಯಿಝು ಸಂಸತ್ ನಲ್ಲಿ ನಡೆದ ಭಾಷಣದಲ್ಲಿ ತಿಳಿಸಿದ್ದಾರೆ.

ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಯಾವುದೇ ಒಪ್ಪಂದಗಳಿಗೆ ತಮ್ಮ ಆಡಳಿತ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿರುವುದಾಗಿ ದಿ ಎಡಿಷನ್ ಪತ್ರಿಕೆ ವರದಿ ಮಾಡಿದೆ. ನವೆಂಬರ್ 17 ರಂದು ಮಾಲ್ಡೀವ್ಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಮುಯಿಝು ಮಾರ್ಚ್ 15 ರೊಳಗೆ ತನ್ನ ದೇಶದಿಂದ 88 ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಔಪಚಾರಿಕವಾಗಿ ವಿನಂತಿಸಿದರು. ಈ ರೀತಿ ವಿನಂತಿಸಲು ಮಾಲ್ಡೀವಿಯನ್ ಜನರು “ಬಲವಾದ ಜನಾದೇಶ” ತಮಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!