ಬಿಜೆಪಿ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ ರಿಲೀಸ್: ದೆಹಲಿಯಿಂದ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ಪರ್ಧೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆ 2024ಕ್ಕೆ ಭರ್ಜರಿ ಪೈಪೋಟಿ ಎದುರಾಗುತ್ತಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ.

ಪಕ್ಷವು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 34 ಸಚಿವರು ಸೇರಿದ್ದಾರೆ.

ನವದೆಹಲಿಯಿಂದ ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್ ಸ್ಪರ್ಧಿಸಲಿದ್ದಾರೆ.ಈ ಮೂಲಕ ಬಿಜೆಪಿ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ದಿ. ಸುಷ್ಮಾ ಸ್ವರಾಜ್‌ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದಾರೆ.

ಇನ್ನು ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅರುಣಾಚಲ ಪಶ್ಚಿಮದಿಂದ ಕಿರಣ್ ರಿಜಿಜು, ದಿಬ್ರುಗಢದಿಂದ ಸರ್ಬಾನಂದ ಸೋನೋವಾಲ್, ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ, ನವದೆಹಲಿಯಿಂದ ಬಾನ್ಸುರಿ ಸ್ವರಾಜ್, ಗಾಂಧಿನಗರದಿಂದ ಅಮಿತ್ ಶಾ, ಪೋರಬಂದರ್‌ನಿಂದ ಮನ್ಸುಖ್ ಮಾಂಡವಿಯಾ, ಸಿಆರ್ ಪಾಟೀಲ್ ಸೇರಿದ್ದಾರೆ.

ಬಿಜೆಪಿ ಲಿಸ್ಟ್:
ವಾರಣಾಸಿ- ನರೇಂದ್ರ ಮೋದಿ
ಅರುಣಾಚಲ ವೆಸ್ಟ್- ಕಿರಣ್ ರಿಜಿಜು
ಅಸ್ಸಾಂನ ದಿಬ್ರುಗಡ್-ಸೊರ್ಬನಾಂದ್ ಸೋನಾವಾಲ್
ಚಾಂದನಿ ಚೌಕ್- ಪ್ರವೀಣ್
ನವದೆಹಲಿ-ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್
ಗಾಂಧಿನಗರ -ಅಮಿತ್ ಶಾ
ರಾಜ್ ಕೋಟ್- ಪುರುಷೋತ್ತಮ್ ರೂಪಾಲ್
ಪೋರ್ ಬಂದರ್- ಮನ್ಸೂಖ್ ಮಾಂಡವೀಯ
ಉಧಮಪುರ-ಜಿತೇಂದ್ರ ಸಿಂಗ್
ಗೊಡ್ಡಾ-ನಿಶಿಕಾಂತ್ ದುಬೆ
ಕಾಸರಗೊಡು- ಅಶ್ವಿನಿ
ಕೊಡರಮಾ-ಅನ್ನಪೂರ್ಣದೇವಿ
ತಿರುವನಂತಪುರಂ-ರಾಜೀವ್ ಚಂದ್ರಶೇಖರ್
ಖುಂಟಿ-ಅರ್ಜುನ್ ಮುಂಡಾ
ಹಜಾರಿಭಾಗ್-ಮನೀಶ್ ಜೈಸ್ವಾಲ್
ವಿದಿಶಾ-ಶಿವರಾಜ್ ಸಿಂಗ್ ಚೌಹಾಣ್ಭೋ
ಪಾಲ್-ಅಲೋಕ್ ಶರ್ಮಾ
ಖಜುರಾಹೋ-ವಿ.ಡಿ.ಶರ್ಮಾ
ಅಲವರ-ಭೂಪೇಂದ್ರ ಯಾದವ್
ಅಂಡಮಾನ್ ನಿಕೋಬಾರ್- ವಿಷ್ಣು ಪಡರೆ
ಅರುಣಾಚಲ ಪೂರ್ವ- ತಾಪಿರ್ ಗಾವೋ
ಕರೀಂಗಂಜ್, ಅಸ್ಸಾಂ – ಕೃಪಾನಾಥ್ ಮಾಲಾ
ಸಿಲ್ಚಾರ್ – ಪರಿಮಳಾ ಶುಕ್ಲವೈದ್ಯ
ಜೋಧಪುರ್-ಗಜೇಂದ್ರ ಸಿಂಗ್ ಶೇಖಾವತ್
ಕೋಟಾ-ಓಂ ಬಿರ್ಲಾ
ಚಿತ್ತೋಡಗಢ್-ಸಿ.ಪಿ.ಜೋಶಿ
ಬಿಕಾನೇರ್-ಅರ್ಜುನ್ ರಾಮ್ ಮೇಘ್ವಾಲ್
ಅಲ್ಮೋಡಾ-ಅಜಯ್ ಟಮಟಾ
ಮುಜಫ್ಪರನಗರ-ಸಂಜೀವ್ ಬಲಿಯಾನ್
ಗೌತಮಬುದ್ಧನಗರ-ಮಹೇಶ್ ಶರ್ಮಾ
ಮಧುರಾ-ಹೇಮಾ ಮಾಲಿನಿ
ಕೈರಾನ್-ಪ್ರದೀಪ್ ಕುಮಾರ್
ಫತೇಪುರಸಿಕ್ರಿ-ರಾಜಕುಮಾರ್ ಚಹರ್
ಸೀತಾಪುರ-ರಾಜೇಶ್ ಶರ್ಮಾ
ಆಗ್ರಾ-ಸತ್ಯಪಾಲ್ ಸಿಂಗ್ ಬಘೇಲಾ
ರಾಂಪುರ್ – ಘನಶಾಮ್
ಮಥುರಾ – ಹೇಮಾಮಾಲಿನಿ
ಉನ್ನಾವ್- ಸಾಕ್ಷಿ ಮಹಾರಾಜ್
ಅಮೇಠಿ- ಸ್ಮೃತಿ ಇರಾನಿ
ಕನೌಜ್ – ಸುಬ್ರತ್ ಪಾಠಕ್
ಫತೇಪುರ್- ಸಾದ್ವಿ ನಿರಂಜನ್ ಜ್ಯೋತಿ
ಫೈಜಾಬಾದ್ (ಅಯೋಧ್ಯಾ)- ಲಲ್ಲು ಸಿಂಗ್
ಲಖನೌ-ರಾಜನಾಥ್ ಸಿಂಗ್
ಝಾನ್ಸಿ-ಅನುರಾಜ್
ಖುಷಿನಗರ-ವಿಜಯ್​ ಕುಮಾರ್
ಗೋರಖಪುರ್-ರವಿ ಕಿಶನ್
ಪಶ್ಚಿಮ ಬಂಗಾಳ (ಕಾಂತಿ) – ಸುವೇಂದು ಅಧಿಕಾರಿ
ಹೂಗ್ಲಿ-ಲಾಕೆಟ್ ಚಟರ್ಜಿ
ಹರ್ದೋಯಿ-ಜಯಪ್ರಕಾಶ್
ಖೇರಿ-ಅಜಯ್ ಮಿಶ್ರಾ
ಅಂಬೇಡ್ಕರ ನಗರ-ರಿತೇಶ್ ಪಾಂಡೆ
ಹಜಾರಿಭಾಗ್-ಮನೀಶ್ ಜೈಸ್ವಾಲ್
ತ್ರಿಶೂರ್-ಸುರೇಶ್ ಗೋಪಿ
ಪಟ್ಟನಂತಿಟ್ಟ-ಅನಿಲ್ ಆ್ಯಂಟನಿ
ಗುನಾ ಲೋಕಸಭಾ ಕ್ಷೇತ್ರ-ಜ್ಯೋತಿರಾದಿತ್ಯ ಸಿಂಧಿಯಾ
ಚಾಂದನಿಚೌಕ್ ಲೋಕಸಭಾ ಕ್ಷೇತ್ರ-ಪ್ರವೀಣ್ ಖಂಡೇಲವಾಲಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!