ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಈ ವರ್ಷದ ಮೊದಲ ಚಂದ್ರಗ್ರಹಣ ಆರಂಭವಾಗಲಿದೆ. ಕರ್ನಾಟಕದಲ್ಲಿ ಬರೀ ಹತ್ತು ನಿಮಿಷಗಳ ಗ್ರಹಣ ಇರಲಿದೆ. ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ಗ್ರಹಣ ನಡೆದಿದೆ. ಸಂಜೆ 6 ಗಂಟೆ 19 ನಿಮಿಷಕ್ಕೆ ಮೋಕ್ಷ ಕಾಲ ನಡೆಯಲಿದೆ.
ಈ ಸಮಯದಲ್ಲಿ ದೇವರ ವಿಗ್ರಹಗಳನ್ನು ಮುಟ್ಟಬಾರದು. ಮನೆಯ ಪೂಜಾ ಸ್ಥಳವನ್ನು ಬಟ್ಟೆ ಅಥವಾ ಪರದೆಯಿಂದ ಮುಚ್ಚಿ ಇಡಬೇಕು ಎನ್ನಲಾಗಿದೆ. ಇದೇ ಕಾರಣಕ್ಕೆ ಗ್ರಹಣ ಸಮಯದಲ್ಲಿ ದೇಗುಲಗಳ ಬಾಗಿಲನ್ನು ಹಾಕಲಾಗುತ್ತದೆ.
ಇನ್ನು ಗ್ರಹಣ ಸಮಯದಲ್ಲಿ ಏನನ್ನೂ ತಿನಬೇಡಿ. ಅಗತ್ಯವಿದ್ದರೆ ತುಳಸಿ ಹಾಕಿದ ನೀರನ್ನು ಕುಡಿಯಬಹುದು. ಗರ್ಭಿಣಿಯರು, ವೃದ್ಧರು ಹಾಗೂ ಮಕ್ಕಳು ಈ ಸಮಯದಲ್ಲಿ ಮನೆಯಲ್ಲಿಯೇ ಇರುವುದು ಸೂಕ್ತ. ಇನ್ನು ಯಾರೇ ಯಾವ ಪದಾರ್ಥ ನೀಡಿದರೂ ಅದನ್ನು ಸೇವಿಸಬಾರದು.
ಗರ್ಭಿಣಿಯರು ಗ್ರಹಣದ ನೆರಳಿಗೆ ನಿಲ್ಲಬಾರದು, ಇದು ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಕೆಲವು ಪ್ರದೇಶಗಳಲ್ಲಿ ಗರ್ಭಿಣಿಯರು ತೆಂಗಿನಕಾಯಿ ಹತ್ತಿರ ಇಟ್ಟುಕೊಂಡು ವಿಶ್ರಾಂತಿ ಪಡೆಯುವ ಪದ್ಧತಿಯೂ ಇದೆ. ಇನ್ನು ಈ ಸಮಯದಲ್ಲಿ ದೈಹಿಕ ಸಂಪರ್ಕ ಮಾಡಬಾರದು, ಈ ಸಮಯದಲ್ಲಿ ಮಕ್ಕಳು ಹುಟ್ಟಿದರೆ ಅದು ಅಶುಭ ಎನ್ನಲಾಗುತ್ತದೆ.



