ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಕೋಟೆ ನಾಡು ಚಿತ್ರದುರ್ಗ (96.8%) ಮೊದಲ ಸ್ಥಾನದಲ್ಲಿದೆ.
ಮಂಡ್ಯ ದ್ವಿತೀಯ (96.74%) ಹಾಗೂ ಹಾಸನ ತೃತೀಯ(96.68%) ಸ್ಥಾನದಲ್ಲಿದೆ. ಕಡೆಯ ಸ್ಥಾನವನ್ನು ಯಾದಗಿರಿ( 75.49%) ಹಾಗೂ ಬೀದರ್(78.73%) ಪಡೆದುಕೊಂಡಿದೆ.
ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ನಂತರ ಫಲಿತಾಂಶ ಬಿಡುಗಡೆ ಮಾಡಿದೆ. ಮಾರ್ಚ್ 31ರಿಂದ ಏಪ್ರಿಲ್ 15 ರವರೆಗೆ ಪರೀಕ್ಷೆ ನಡೆದಿದ್ದು, ಏ.21ರಿಂದ ಮೌಲ್ಯಮಾಪನ ಆರಂಭವಾಗಿತ್ತು.
ಫಲಿತಾಂಶ ವೀಕ್ಷಿಸುವುದು ಹೇಗೆ?
ಮೊದಲು ಸರ್ಕಾರದ ಅಧಿಕೃತ ವೆಬ್‌ಸೈಟ್ http://karresults.nic.in ಓಪನ್ ಮಾಡಿ, ನಂತರ ಮುಖಪುಟದಲ್ಲಿ ಕರ್ನಾಟಕ ಎಸ್‌ಎಸ್‌ಎಲ್‌ಸಿ 2023 ಫಲಿತಾಂಶದ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಲಾಗಿನ್ ಮಾಡುವಂತೆ ಕೇಳುತ್ತದೆ, ನಿಮ್ಮ ಹಾಲ್ ಟಿಕೆಟ್ ವಿವರಗಳನ್ನು ನೀಡಿ ಕ್ಲಿಕ್ ಮಾಡಿದರೆ ಫಲಿತಾಂಶ ಪ್ರಕಟವಾಗುವುದು.