ಭದ್ರಾವತಿಯಲ್ಲಿ ಧರೆಗೆ ತಂಪೆರೆದ ವರ್ಷದ ಮೊದಲ ಮಳೆ

ಹೊಸದಿಗಂತ ಶಿವಮೊಗ್ಗ;

ಭದ್ರಾವತಿ ನಗರದೆಲ್ಲೆಡೆ ಬುಧವಾರ ಸಂಜೆ ಸುಮಾರು 1 ತಾಸು ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಕಾದ ಬಾಣಲಿಯಂತಾಗಿದ್ದ ಧರೆ ತಂಪಾಗಿದೆ.

ಕಳೆದ ಕೆಲವು ದಿನಗಳಿಂದ ಸುಡು ಬಿಸಿಲು ವ್ಯಾಪಕವಾಗಿದ್ದು, ಬಿಸಿಲಿನ ತಾಪದಿಂದ ಜನರು ಕಂಗೆಟ್ಟಿದ್ದರು. ಸುಮಾರು 1 ತಾಸು ಸುರಿದ ಮಳೆಯಿಂದಾಗಿ ಹಳ್ಳಕೊಳ್ಳಗಳಲ್ಲಿ ಸ್ವಲ್ಪ ನೀರು ತುಂಬಿಕೊಂಡಿದೆ. ಜನರು ನಿಟ್ಟುಸಿರು ಬಿಡುವಂತಾಗಿದೆ.

ಇದು ವರ್ಷದ ಮೊದಲ ಮಳೆಯಾಗಿದ್ದು, ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಬೀಳುವ ನಿರೀಕ್ಷೆ ಇದೆ. ಈಗಾಗಲೇ ಕೆಲವು ಕೆರೆ ಹಾಗು ಹಳ್ಳಕೊಳ್ಳಗಳು, ಜಲ ಮೂಲಗಳು ಸಂಪೂರ್ಣವಾಗಿ ಬರಿದಾಗಿವೆ. ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಭದ್ರಾ ಜಲಾಶಯ ಸಮೀಪದಲ್ಲಿದ್ದರೂ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!