March 19, 2026
Thursday, March 19, 2026
spot_img

ಸೇವಾ ತೀರ್ಥದಲ್ಲಿ ಮೊದಲ ಕೇಂದ್ರ ಸಂಪುಟ ಸಭೆ: ಹಲವು ಮಹತ್ವದ ನಿರ್ಣಯಗಳಿಗೆ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸದಾಗಿ ನಿರ್ಮಿಸಲಾದ ಪ್ರಧಾನ ಮಂತ್ರಿ ಕಚೇರಿ ಸಂಕೀರ್ಣ ‘ಸೇವಾ ತೀರ್ಥ’ದಲ್ಲಿ ಕೇಂದ್ರ ಸಂಪುಟದ ಮೊದಲ ಸಭೆ ಸೋಮವಾರ ನಡೆಯಿತು. ಹಿಂದು ಪಂಚಾಂಗದ ಪ್ರಕಾರ ವಿಶೇಷ ಮಹತ್ವ ಹೊಂದಿದ ದಿನದಲ್ಲಿ ನಡೆದ ಈ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನಗಳಿಗೆ ಅನುಮೋದನೆ ನೀಡಲಾಗಿದೆ.

ಸಭೆಯಲ್ಲಿ ‘ಸೇವಾ ಸಂಕಲ್ಪ’ ನಿರ್ಣಯ ಅಂಗೀಕರಿಸಲಾಯಿತು. ಜೊತೆಗೆ ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ. ಶ್ರೀನಗರದಲ್ಲಿನ ಸಮಗ್ರ ವಿಮಾನ ನಿಲ್ದಾಣ ಟರ್ಮಿನಲ್ ಅಭಿವೃದ್ಧಿ ಯೋಜನೆಗೂ ಹಸಿರು ನಿಶಾನೆ ತೋರಿಸಲಾಗಿದೆ.

ಇದನ್ನೂ ಓದಿ:

ಸಭೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಯುಗಾಬ್ದ 5127, ವಿಕ್ರಮ ಸಂವತ್ 2082, ಫಾಲ್ಗುಣ ಶುಕ್ಲ ಅಷ್ಟಮಿ ದಿನ ಈ ಸಭೆ ನಡೆದಿದ್ದು, ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !