ಅನೇಕ ಜನರು ಮೀನು ತಿನ್ನೋದನ್ನ ಬಹಳ ಇಷ್ಟಪಡುತ್ತಾರೆ. ಮುಖ್ಯವಾಗಿ ಮಂಗಳೂರು ಭಾಗದ ಜನರಿಗೆ ಮೀನು ಅನ್ನುವುದು ಜೀವನದ ಒಂದು ಭಾಗ ಅಂತಾನೆ ಹೇಳ್ಬಹುದು. ಆದರೆ, ಈ ಪ್ರೀತಿಗೆ ಒಂದು ಸಣ್ಣ ಅಡಚಣೆ ಮೀನು ತಯಾರಿಸುವಾಗ ಬರುವ ಅದರ ಘಾಟು ಅಥವಾ ವಾಸನೆ. ಕೆಲವರಿಗೆ ಇದು ಸಹಿಸಲಾಗದಷ್ಟು ಅಸಹ್ಯವಾಗಿರುತ್ತೆ. ಹೀಗಾಗಿ ಹೆಚ್ಚಾಗಿ ಮಹಿಳೆಯರು ಮನೆಯಲ್ಲೇ ಮೀನು ಅಡುಗೆ ಮಾಡೋದಕ್ಕೆ ಹಿಂದೇಟು ಹಾಕ್ತಾರೆ.
ಆದರೆ ಮನೆಯಲ್ಲಿಯೇ ಲಭ್ಯವಿರುವ ಕೆಲವು ಸಿಂಪಲ್ ಸಾಮಗ್ರಿಗಳ ಸಹಾಯದಿಂದ ಮೀನಿನ ಈ ವಾಸನೆಯನ್ನು ಕಡಿಮೆ ಮಾಡಬಹುದು. ಹೇಗೆ ಅಂತೀರಾ ಇಲ್ಲಿ ನೋಡಿ!
ಉಪ್ಪು ಮತ್ತು ಅರಿಶಿನ :
ಮೀನನ್ನು ಅಡುಗೆಗೆ ಬಳಸುವ ಮುನ್ನ ಅರ್ಧ ಗಂಟೆ ಉಪ್ಪು ಮತ್ತು ಅರಿಶಿನ ಮಿಶ್ರಣದಲ್ಲಿ ನೆನಸಿಟ್ಟರೆ ವಾಸನೆ ಬರೋದಿಲ್ಲ. ಈ ಎರಡು ಪದಾರ್ಥಗಳು ನೈಸರ್ಗಿಕ ಬ್ಯಾಕ್ಟೀರಿಯಾ ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. ಅವು ಮೀನಿನ ಮೇಲಿನ ದುರ್ಮಾಸೆಗಳನ್ನು ತೆಗೆದುಹಾಕುತ್ತವೆ.
ನಿಂಬೆ ರಸ ಅಥವಾ ವಿನೆಗರ್:
ಬಿಳಿ ವಿನೆಗರ್ ಅಥವಾ ನಿಂಬೆ ರಸದಲ್ಲಿ ಮೀನನ್ನು 10–15 ನಿಮಿಷಗಳಷ್ಟು ಕಾಲ ನೆನೆಸಿದ ನಂತರ ಶುದ್ಧ ನೀರಿನಲ್ಲಿ ತೊಳೆಯುವುದರಿಂದ ವಾಸನೆ ಕಡಿಮೆಯಾಗುತ್ತೆ.
ಕಾರ್ನ್ ಫ್ಲೋರ್ ಹಿಟ್ಟು:
ಕಾರ್ನ್ ಫ್ಲೋರ್ ಮತ್ತು ನೀರಿನಿಂದ ತಯಾರಿಸಿದ ಮಿಶ್ರಣವನ್ನು ಮೀನಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಡುವುದರಿಂದ ಮೀನಿನ ಮೇಲಿನ ಅಶುದ್ಧಿಗಳ ಜೊತೆಗೆ ದುರ್ಗಂಧವೂ ಕಡಿಮೆಯಾಗುತ್ತೆ.
ಹಾಲಿನಲ್ಲಿ ನೆನೆಸುವುದು:
20 ರಿಂದ 30 ನಿಮಿಷಗಳ ಕಾಲ ಮೀನನ್ನು ಹಾಲಿನಲ್ಲಿ ನೆನೆಸಿದರೆ, ಅದರಲ್ಲಿ ಇರುವ ಕ್ಯಾಸೀನ್ ಎಂಬ ಪ್ರೊಟೀನ್ ಟ್ರೈಮೆಥೈಲಮೀನ್ (TMA) ಎಂಬ ಘಾಟುವಾಸನೆ ಉಂಟುಮಾಡುವ ಅಂಶವನ್ನು ಕಡಿಮೆಯಾಗಿ ವಾಸನೆಯೂ ಕಡಿಮೆಯಾಗುತ್ತೆ.
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್:
ಇವುಗಳ ಪೇಸ್ಟ್ ಅನ್ನು ಮೀನಿಗೆ ಹಚ್ಚಿದರೆ ಅದು ಗಂಧವನ್ನು ಹೀರಿಕೊಳ್ಳುತ್ತೆ. ಜೊತೆಗೆ ರುಚಿಯೂ ನೀಡುತ್ತದೆ. ಈ ಮಿಶ್ರಣವು ಪ್ರಾಕೃತಿಕ ಆರೊಮ್ಯಾಟಿಕ್ ಗುಣಗಳನ್ನು ಹೊಂದಿರುವುದರಿಂದ ಉತ್ತಮ ಪರಿಣಾಮ ನೀಡುತ್ತದೆ.