Friday, December 19, 2025

ಮೀನು ಸಾಗಿಸುತ್ತಿದ್ದ ಟ್ರಕ್ ಅಪಹರಣ: ನಾಲ್ವರು UNLF ಉಗ್ರರು ಸೇರಿ 7 ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಮೀನು ಸಾಗಿಸುತ್ತಿದ್ದ ಟ್ರಕ್ ವೊಂದನ್ನು ಅಪಹರಿಸಿದ ಆರೋಪದ ಮೇಲೆ ನಿಷೇಧಿತ ಸಂಘಟನೆಯ ನಾಲ್ವರು ಸದಸ್ಯರು ಸೇರಿದಂತೆ ಏಳು ಜನರನ್ನು ಭದ್ರತಾ ಪಡೆಗಳು ಬಂಧಿಸಿವೆ.

ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಪಾಂಬೆ) ಸಂಘಟನೆಯ ನಾಲ್ವರು ಸದಸ್ಯರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ಬಂಧಿತ ಉಗ್ರರನ್ನು ಬೋರಿಶ್ ಸಗೋಲ್ಸೆಮ್ (25), ಹೆರೋಜಿತ್ ಶರ್ಮಾ (32), ಅಸೆಮ್ ಅಮರ್ ಮೈಟೈ (20) ಮತ್ತು ಮುಹಮ್ಮದ್ ಸಲ್ಮಾನ್ ಖಾನ್ (35) ಎಂದು ಗುರುತಿಸಲಾಗಿದೆ.

ಮಹಾರಬಿ-ಫೀಡಿಂಗಾ ರಸ್ತೆಯಿಂದ ಐಸ್‌ಡ್ ಮೀನಿನ ಪೆಟ್ಟಿಗೆಗಳನ್ನು ತುಂಬಿದ್ದ ಟ್ರಕ್ ಅನ್ನು ಅವರು ಅಪಹರಿಸಿದ್ದರು.

error: Content is protected !!