ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಬ್ಬರನ್ನೊಬ್ಬರು ರಕ್ಷಿಸಲು ಯತ್ನಿಸಿದ ಐವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಭಾನುವಾರ ಸಂಜೆ ಎಂಟು ಯುವಕರ ತಂಡ ಹಿಂಗ್ನಾ ಪ್ರದೇಶದಲ್ಲಿ ವಿಹಾರಕ್ಕೆ ತೆರಳಿದ್ದವರು ನಾಪತ್ತೆಯಾಗಿದ್ದಾರೆ.
ವಿವರಗಳಿಗೆ ಹೋದರೆ, ಕೆರೆ ಕಡೆ ಹೋಗುತ್ತಿದ್ದ ಎಂಟು ಸ್ನೇಹಿತರು ಜಿಲ್ಪಿ ಸರೋವರ ಕಂಡೊಡನೆ ಅವರಲ್ಲಿ ಕೆಲವರು ಅಲ್ಲಿಯೇ ಈಜಲು ನೀರಿಗಿಳಿದಿದ್ದಾರೆ. ಗುಂಪಿನಲ್ಲೊಬ್ಬರು ಈಜಲು ಹರಸಾಹಸ ಪಡುತ್ತಿರುವುದನ್ನು ಕಂಡು ಉಳಿದವರು ಆತನನ್ನು ರಕ್ಷಿಸಲು ಯತ್ನಿಸಿದರು. ಈ ಪ್ರಯತ್ನದಲ್ಲಿ ಐವರು ನೀರಿನಲ್ಲಿ ಮುಳುಗಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳೀಯರ ಸಹಾಯದಿಂದ ಶೋಧ ಕಾರ್ಯ ಆರಂಭಿಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ರಿಷಿಕೇಶ್ ಪರೇದ್ (21), ವೈಭವ್ ವೈದ್ಯ (20), ರಾಹುಲ್ ಮೆಶ್ರಾಮ್ (21), ನಿತಿನ್ ಕುಂಬಾರೆ (21) ಮತ್ತು ಶಾಂತನು ಅರ್ಮಾಕರ್ (22) ಅವರ ಮೃತದೇಹಗಳನ್ನು ರಾತ್ರಿ 10 ಗಂಟೆಯ ಸುಮಾರಿಗೆ ನೀರಿನಿಂದ ಹೊರತೆಗೆಯಲಾಯಿತು. ಆಕಸ್ಮಿಕ ಸಾವು ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.