ಐದು ಗ್ಯಾರಂಟಿ ಯೋಜನೆ: ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ ಸಿದ್ಧರಾಮಯ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರಕಾರ ಘೋಷಿಸಿರುವ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಬಸ್​​ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣದ ಮಿತಿಗೆ (ಕಿಲೋ ಮೀಟರ್) ಮಾನದಂಡ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ (Siddaramaiah) ಮಾಹಿತಿ ಪಡೆದುಕೊಂಡಿದ್ದಾರೆ.

ಅದೇ ರೀತಿ ಯುವ ನಿಧಿ ಗ್ಯಾರಂಟಿ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ.

ಪ್ರತಿ ವರ್ಷ ಸುಮಾರು 4.5 ಲಕ್ಷ ಪದವೀಧರರು ಪಾಸ್ ಔಟ್ ಆಗುತ್ತಾರೆ. ಪದವಿ ಪಾಸ್ ಆದವರಿಗೆ 135 ಕೋಟಿ ರೂಪಾಯಿ ಅಂದಾಜು (ಮಾಸಿಕ) ವೆಚ್ಚ ಆಗಲಿದೆ. ಇನ್ನು ಸುಮಾರು 45 ಸಾವಿರ ಡಿಪ್ಲೊಮಾ ವಿದ್ಯಾರ್ಥಿಗಳು ವಾರ್ಷಿಕವಾಗಿ ಪಾಸ್ ಔಟ್ ಆಗುತ್ತಾರೆ. ಡಿಪ್ಲೊಮಾ 1,500 ರೂಪಾಯಿ ಅಂದರೆ ವಿದ್ಯಾರ್ಥಿಗಳಿಗೆ ಮಾಸಿಕ ಸುಮಾರು 7 ಕೋಟಿ ರೂ. ಅಂದಾಜು ವೆಚ್ಚ ತಗುಲುತ್ತೆ. ಅನ್ನಭಾಗ್ಯ 1.27 ಕೋಟಿ ಬಿಪಿಎಲ್ ಕಾರ್ಡ್​​ದಾರರಿಗೆ ಪ್ರಯೋಜನವಾಗಲಿದ್ದು, 10 ಕೆ‌.ಜಿ ಅಕ್ಕಿ ಅನ್ನಭಾಗ್ಯದಡಿ ಸಿಗಲಿದೆ.

5 ಗ್ಯಾರಂಟಿಗಳಿಗೆ ವಾರ್ಷಿಕ ಒಟ್ಟು 50 ಸಾವಿರ ಕೋಟಿ ವೆಚ್ಚ ಸಾಧ್ಯತೆ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್​ರಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ.BPL ಕಾರ್ಡ್​ದಾರರಿಗೆ ‘ಗೃಹಲಕ್ಷ್ಮೀ’ ಯೋಜನೆಗೆ ವಾರ್ಷಿಕ 12 ಸಾವಿರ ಕೋಟಿ ವೆಚ್ಚ ಸಾಧ್ಯತೆ ಇದೆ.

ಸಭೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ವಿಸ್ತೃತವಾಗಿ ಚರ್ಚೆ ಆಗಿದ್ದು, ಉಚಿತ ವಿದ್ಯುತ್​ ಯೋಜನೆಯಿಂದ 2.14 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ವಾರ್ಷಿಕ ಬಳಕೆ ಅಂದಾಜು 13,575 ಮಿಲಿಯನ್ ಯೂನಿಟ್ ಅಗತ್ಯವಾಗಿದೆ. ಈ ಯೋಜನೆಗೆ ಅಂದಾಜು 8,008 ಕೋಟಿ ರೂ. ಇಂಧನ ಶುಲ್ಕ ತಗುಲಿಲಿದ್ದು, ಯೋಜನೆ ಜಾರಿಗೆ ಒಟ್ಟು 12,038 ಕೋಟಿ ರೂಪಾಯಿ ಅಗತ್ಯವಿದೆ ಎನ್ನಲಾಗುತ್ತಿದೆ.

ಜೂನ್.1ರಂದು ನಡೆಯಲಿರುವಂತ ಸಚಿವ ಸಂಪುಟ ಸಭೆಯಲ್ಲಿ ಅವುಗಳಿಗೆ ರೂಪು ರೇಷೆ ನೀಡಿ ಅಧಿಕೃತವಾಗಿ ಆದೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!