ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ವೀಕ್ಷಿಸುವ ವೇಳೆ ಪತ್ರಾಸ ಮೇಲಿಂದ ಬಿದ್ದು ಐವರಿಗೆ ಗಾಯ, ಆಸ್ಪತ್ರೆಗೆ ದಾಖಲು

ಹೊಸದಿಗಂತ ವರದಿ ಬಸವನಬಾಗೇವಾಡಿ :

ಜಾತ್ರೆ ನಿಮಿತ್ತ ಶುಕ್ರವಾರ ಗೆಳೆಯರ ಬಳಗ ಹಾಗೂ ಕರವೇ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ 55 ಹೆಚ್.ಪಿ.‌ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ವೇಳೆ‌ ಕಟ್ಟಡದ ಮೇಲೆ‌ ಕುಳಿತ ಸ್ಪರ್ಧೆ ವೀಕ್ಷಿಸುತ್ತಿದ್ದ ಕಟ್ಟಡದ ಪತ್ರಾಸ ಕುಸಿದು ಐವರು ಯುವಕರು‌ ಮೇಲಿಂದ ಬಿದ್ದು ಗಾಯಗೊಂಡಿರು ವ ಘಟನೆ ರಾತ್ರಿ 8 ಗಂಟೆ‌ ಸುಮಾರು ಸಂಭವಿಸಿದೆ.

ಗೆಳೆಯರ ಬಳಗದವರು ಹಾಗೂ ಕರವೇ ಮುಖಂಡರು ಟ್ರಾಕ್ಟರ್ ಜಗ್ಗುವ ಸ್ಪರ್ಧೆ ನಡೆಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮೌಖಿಕವಾಗಿಯೂ ಪೊಲೀಸ್ ಇಲಾಖೆಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ‌ ನೀಡಿದ್ದರು. ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಿಷೇಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಅನುಮತಿ‌ ನೀಡುವುದಿಲ್ಲ ಎಂದು ಪೊಲೀಸ್ ಇಲಾಖೆ‌ ಹಿರಿಯ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ನೋಟಿಸ್ ಸಹ ನೀಡಿದರೂ, ಆಯೋಜಕರು ಅದನ್ನು ಪರಿಗಣಿಸದೇ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ‌ ನಡೆಸಿದರು. ಸ್ಪರ್ಧೆ ವೀಕ್ಷಿಸಲು ತಾಲ್ಲೂಕು ಸೇರಿ ವಿವಿಧ ಗ್ರಾಮಗಳಿಂದ ಸಹಸ್ರರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿ ಸ್ಪರ್ಧೆ ನಡೆಯುವ ಸ್ಥಳದ ಸುತ್ತಮುತ್ತಲಿನ ಕಟ್ಟಡಗಳ‌ ಮೇಲೆ‌ ಕುಳಿತು ವೀಕ್ಷಿಸುತ್ತಿದ್ದರು.

ರಾತ್ರಿ 8ರ ಸುಮಾರಿಗೆ ಸ್ಪರ್ಧೆ ನಡೆಯುವ ಸ್ಥಳದಲ್ಲಿದ್ದ ಅಂಬೇಡ್ಕರ್ ಭವನದ ಪತ್ರಾಸ್ ಮೇಲೆ‌ ಕುಳಿತು ಸ್ಪರ್ಧೆ ವೀಕ್ಷಿಸುವಾಗ ಪತ್ರಾಸ್ ಮುರಿದು ಐವರು ಯುವಕರು ಮೇಲಿಂದ‌ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಗಾಯಗೊಂಡವರು ಸಾವಳಗಿಯ ಸಿದ್ದು ವಸಂತ ಪವಾರ (32), ಅಶೋಕ‌ ಮಾದರ (23) ಬಸವನಬಾಗೇವಾಡಿ ಪಟ್ಟಣದ ಅಲಿ ಹಾಜೀಸಾಬ ಮುಲ್ಲಾ (22), ವಡವಡಗಿ ಗ್ರಾಮದ ಕಿರಣ ಲಕ್ಷ್ಮಣ ರಾಠೋಡ(22) ಹಾಗೂ ಆಶೀಪ್ ಬಾಗವಾನ (17) ಘಟನೆಯಲ್ಲಿ‌ ಗಾಯಗೊಂಡ ಯುವಕರು. ಗಾಯಗೊಂಡವರಿಗೆ ತಾಲ್ಲೂಕಾಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ‌ ಗಂಭೀರ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುವುದು ಎಂದು‌ ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!