ಜಾರ್ಖಂಡ್‌ನಲ್ಲಿ ಐವರು ನಕ್ಸಲರ ಎನ್‌ಕೌಂಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೊಲೀಸರು ಹಾಗೂ ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಐವರು ನಕ್ಸಲರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ರಾಜ್ಯದ ಸಿಂಗಭೂಮ್ ಜಿಲ್ಲೆಯ ಅರಣ್ಯದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ನಕ್ಸಲರು ಸಂಚರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೇಂದ್ರ ಮೀಸಲು ಪೊಲೀಸ್, ಕೋಬ್ರಾ ಬೆಟಾಲಿಯನ್ ಮತ್ತು ರಾಜ್ಯ ಸಶಸ್ತ್ರ ಪೊಲೀಸರು ಜಂಟಿಯಾಗಿ ಕೂಂಬಿಂಗ್ ನಡೆಸಿದ್ದರು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಪಲಾಮು-ಛತ್ರ ಗಡಿಯಲ್ಲಿ ನಕ್ಸಲರು ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಖಾಕಿಗಳ ಆಗಮನವನ್ನು ಅರಿತ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಐವರು ನಕ್ಸಲರು ಹತರಾಗಿದ್ದಾರೆ.ಮತ್ತೋರ್ವ ಗಾಯಗಳೊಂದಿಗೆ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

ನಕ್ಸಲೀಯರಿಗೆ ಸಹಕರಿಸಿದ ಇತರ ವ್ಯಕ್ತಿಗಳಿಗಾಗಿ ಪೊಲೀಸರು ಅರಣ್ಯದಲ್ಲಿ ಶೋಧ ಮುಂದುವರೆಸಿದ್ದಾರೆ. ಇಲ್ಲಿಯವರೆಗೆ ಎರಡು ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಡಿನಲ್ಲಿ ಇನ್ನೂ ಕೆಲವು ಆಯುಧಗಳು ಪತ್ತೆಯಾಗುವ ನಿರೀಕ್ಷೆಯಿದೆ. 25 ಲಕ್ಷ ಬಹುಮಾನ ಘೋಷಿಸಿರುವ ವಿಶೇಷ ಪ್ರದೇಶ ಸಮಿತಿಯ ಸದಸ್ಯ ಗೌತಮ್ ಪಾಸ್ವಾನ್ ಅವರು ತಮ್ಮ ತಂಡದೊಂದಿಗೆ ಎನ್‌ಕೌಂಟರ್ ಸ್ಥಳದಲ್ಲಿದ್ದಾರೆಂದು ಮಾಹಿತಿ ಬಂದಿದೆ. ಇನ್ನು ಇಬ್ಬರು ನಕ್ಸಲೀಯರ ಮೇಲೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಜಾರ್ಖಂಡ್‌ನಲ್ಲಿ ನಕ್ಸಲರ ಹಾವಳಿಯನ್ನು ಕಡಿಮೆ ಮಾಡಲು ಪೊಲೀಸರು ಕೆಲವು ದಿನಗಳಿಂದ ಶ್ರಮಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!