ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ.
ಏರ್ ಇಂಡಿಯಾ ವಿಮಾನ AI 130ರಲ್ಲಿ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಕೆಲವರಿಗೆ ವಾಕರಿಕೆ ಮತ್ತು ತಲೆತಿರುಗುವಿಕೆ ಸೇರಿದಂತೆ ಆರೋಗ್ಯ ವ್ಯತ್ಯಾಸ ಕಂಡು ಬಂದಿದೆ.
ವಿಮಾನದಲ್ಲಿ ಆರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 11 ಜನರು ಅಸ್ವಸ್ಥರಾಗಿದ್ದಾರೆ. ಈ ವೇಳೆ ವಿಮಾನ ಮುಂಬೈನಲ್ಲಿ ಇಳಿದಿದೆ. ನಂತರ ಇಬ್ಬರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಿದೆ ಎಂದು ಹೇಳಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕೆಲವೊಂದು ಬಾರಿ ಇಂತಹ ಘಟನೆಗಳು ನಡೆಯು ಸಾಧ್ಯತೆ ಇರುತ್ತದೆ ಏಕೆಂದರೆ ಕ್ಯಾಬಿನ್ನಲ್ಲಿ ಒತ್ತಡ ಕೆಲಸಗಳು ಇರುತ್ತದೆ. ಆದರೆ ವಿಷಪ್ರಾಶನ ಆಗಿದ್ದೀಯಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಕಂಪನಿ ಹೇಳಿದೆ.