ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಥುರಾದ ಬಂಕೆ ಬಿಹಾರಿ ದೇವಸ್ಥಾನದ ಬಳಿ ಮಂಗಳವಾರ ಭಾರೀ ಅಪಘಾತ ಸಂಭವಿಸಿದ್ದು, ಇಲ್ಲಿನ ದುಸೇಟ್ ಪ್ರದೇಶದಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡದ ಬಾಲ್ಕನಿ ಮತ್ತು ಗೋಡೆ ಕುಸಿದು ಐದು ಮಂದಿ ಸಾವನ್ನಪ್ಪಿದ್ದು , ಸುಮಾರು 12 ಜನರು ಗಾಯಗೊಂಡಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಪುಲ್ಕಿತ್ ಖರೆ ಐದು ಮಂದಿ ಸಾವನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವೃಂದಾವನದ ಸೌಶಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆಯಿಂದ ಮೂರು ಅಂತಸ್ತಿನ ಕಟ್ಟಡದ ಬಾಲ್ಕನಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಮೃತರು ಮತ್ತು ಗಾಯಗೊಂಡವರಿಗೆ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಡಿಎಂ ಪುಲ್ಕಿತ್ ಖರೆ ತಿಳಿಸಿದ್ದಾರೆ.
VIDEO | A portion of an old building collapses near Banke Bihari Temple in Vrindavan. More details are awaited. pic.twitter.com/lRUd9H7GTr
— Press Trust of India (@PTI_News) August 15, 2023