ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾರೆನ್ಸ್ ಬಿಷ್ಣೋಯ್ ಮತ್ತು ರೋಹಿತ್ ಗೋದಾರಾ ಗ್ಯಾಂಗ್‍ಗೆ ಸೇರಿದ ಐವರು ಶೂಟರ್‌ಗಳನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದಿನೇಶ್ ಅಲಿಯಾಸ್ ದೀನು, ಜಗದೀಶ್ ಅಲಿಯಾಸ್ ಜಗ್ಗು, ವಿಷ್ಣು, ಸಾಗರ್ ಮತ್ತು ಪ್ರದೀಪ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಮೂರು ವಿದೇಶಿ ನಿರ್ಮಿತ ಗ್ಲೋಕ್ ಪಿಸ್ತೂಲ್, ಐದು ಸ್ವಯಂಚಾಲಿತ ಪಿಸ್ತೂಲ್‍ಗಳು ಮತ್ತು 55 ಸಜೀವ ಕಾಟ್ರಿಡ್ಜ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.