ಸುತ್ತಳತೆ ಕಮ್ಮಿ ಮಾಡಿಕೊಳ್ಳೋಕೆ ಐದು ಸಿಂಪಲ್ ಟಿಪ್ಸ್..

ಜಿಮ್‌ಗೆ ಹೋಗಿ ಕಸರತ್ತು ಮಾಡಿದರೂ ಹೊಟ್ಟೆಯ ಫ್ಯಾಟ್ ಮಾತ್ರ ಕಡಿಮೆ ಆಗೋದಿಲ್ಲ. ಸುತ್ತಳತೆ ಕಡಿಮೆ ಮಾಡಲು ಊಟ, ತಿಂಡಿ ಹಾಗೂ ವ್ಯಾಯಾಮ ಎಲ್ಲವೂ ಮುಖ್ಯ. ಹೊಟ್ಟೆಯ ಫ್ಯಾಟ್ ಬಾರದಂತೆ ತಡೆಗಟ್ಟಲು ಇಲ್ಲಿದೆ ಪವರ್‌ಫುಲ್ ಟಿಪ್ಸ್..

ಅತಿಹೆಚ್ಚು ಫೈಬರ್ ಇರುವ ಆಹಾರ ಸೇವಿಸಿ
ಫೈಬರ್ ಇರುವ ತರಕಾರಿಗಳ ಸೇವನೆಗೆ ಆದ್ಯತೆ ಕೊಡಿ, ಜಂಕ್ ಫುಡ್, ಸಕ್ಕರೆ ಅಂಶವುಳ್ಳ ಆಹಾರ ಸೇವನೆ ಇಂದಿನಿಂದಲೇ ನಿಲ್ಲಿಸಿಬಿಡಿ.

ಫ್ಯಾಟ್ ಇರುವ ಪ್ಯಾಕ್ ಆಗಿರುವ ಆಹಾರ ಸೇವನೆ ನಿಲ್ಲಿಸಿ
ಪ್ಯಾಕ್ ಆಗಿರುವ ಆಹಾರ ಸೇವನೆ ಮಾಮೂಲಿ ಆದರೆ ಇದರಿಂದ ಹೆಚ್ಚು ಫ್ಯಾಟ್ ನಿಮ್ಮ ದೇಹಕ್ಕೆ ಸೇರುತ್ತದೆ. ಇದನ್ನು ಕರಗಿಸುವುದು ತುಂಬಾ ಕಷ್ಟ.

ಮದ್ಯಪಾನದಿಂದ ದೂರ ಇರಿ
ಧೂಮಪಾನ ಮದ್ಯಪಾನದಿಂದ ಆರೋಗ್ಯ ಹಾಳಾಗುತ್ತದೆ. ಇದು ಬರೀ ಬೆಲ್ಲಿ ಫ್ಯಾಟ್ ಕರಗಿಸಲು ಮಾತ್ರ ಅಲ್ಲ, ಮದ್ಯಪಾನ ಬಿಟ್ಟರೆ ಬೇರೆ ರೀತಿಯ ಸಾಕಷ್ಟು ಉಪಯೋಗಗಳಿವೆ.

ಒತ್ತಡ ಕಡಿಮೆ ಮಾಡಿಕೊಳ್ಳಿ
ಜೀವನದಲ್ಲಿ ಆಹಾರ ಕ್ರಮ ಹೇಗೆ ಮುಖ್ಯವೋ, ಹಾಗೆಯೇ ಜೀವನದಲ್ಲಿ ಒತ್ತಡ ಇಲ್ಲದಿರುವುದು ಅಷ್ಟೇ ಮುಖ್ಯ. ಸ್ಟ್ರೆಸ್ ಹೆಚ್ಚಾದಷ್ಟು ತೂಕ ಹೆಚ್ಚುವುದು ಸಾಮಾನ್ಯ.

ಸಕ್ಕರೆ ತಿಂಡಿ ಬಿಡಿ
ಸಕ್ಕರೆ ಅಂಶವುಳ್ಳ ಆಹಾರಗಳನ್ನು ಸೇವಿಸಬೇಡಿ. ಮನೆಯಲ್ಲಿ ಸಕ್ಕರೆ ಹಾಕಿ ಮಾಡಿದ್ದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬೇಕರಿ ಆಹಾರ, ಮೈದಾ ಕೂಡ ಬಿಟ್ಟುಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!