-ಮೇಘನಾ ಶೆಟ್ಟಿ, ಶಿವಮೊಗ್ಗ
ಎಲ್ಲೋ ಮುರಿದ ಕಿಟಕಿಯಿಂದ ಅರ್ಧಂಬರ್ಧ ಬೆಳಕು, ಹಳೇ ಕಟ್ಟಡ, ಕಟ್ಟಡದೊಳಗೆ ಮೂತ್ರದ ವಾಸನೆ, ಕಂಬಿ ಎಣಿಸುತ್ತಾ ನಿಲ್ಲೋ ಕೈದಿಗಳು..
ಪೊಲೀಸ್ ಸ್ಟೇಷನ್ ಅನ್ನೋದನ್ನು ಸಿನಿಮಾಗಳಲ್ಲಿ ಹೀಗೆ ತಾನೆ ತೋರಿಸ್ತಾರೆ? ಕೆಲವು ಪೊಲೀಸ್ ಠಾಣೆಗಳು ಹೀಗೆ ಇರೋದು ಕೂಡ ಹೌದು. ಆದ್ರೆ ಉತ್ತರಪ್ರದೇಶದ ಗೋರಖ್‌ಪುರದಲ್ಲೊಂದು ಠಾಣೆ ಇದೆ, ಅಲ್ಲಿಗೆ ಹೋಗಿ ನೋಡಿದರೂ ಅದು ಠಾಣೆ ಅಂತ ನಂಬೋಕಾಗೋದಿಲ್ಲ, ಯಾಕಂದ್ರೆ ಠಾಣೆ ನೋಡೋಕೆ ಸೇಮ್ ಫೈವ್ ಸ್ಟಾರ್ ಹೊಟೇಲ್ ರೀತಿ ಇದೆ!
ಹೌದು, ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಫೈವ್ ಸ್ಟಾರ್ ಪೊಲೀಸ್ ಸ್ಟೇಷನ್‌ನ್ನು ಉದ್ಘಾಟನೆ ಮಾಡಿದ್ದಾರೆ. ಫಳ ಫಳ ನೇತಾಡುವ ಲೈಟ್‌ಗಳು, ನೂತನ ಟೆಕ್ನಾಲಜಿ, ಶಾಂದಾರ್ ಸೆಂಟ್ರಲೈಸ್ಡ್ ಎಸಿ, ದೊಡ್ಡ ಹಾಲ್.. ಪೊಲೀಸ್ ಸ್ಟೇಷನ್ ಅನ್ನೋ ಇಮ್ಯಾಜಿನೇಷನ್‌ಗೆ ಪಕ್ಕಾ ವಿರುದ್ಧವಾಗಿದೆ ಈ ಪೊಲೀಸ್ ಠಾಣೆ!
ಮೂರು ಫ್ಲೋರ್ ಇರುವ ಈ ಠಾಣೆಯ ಬಂಡವಳಾ ಎಷ್ಟು ಗೊತ್ತಾ? ಬರೋಬ್ಬರಿ 17 ಕೋಟಿ 94 ಲಕ್ಷ ರೂಪಾಯಿಗಳಾಗಿದೆ. ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್, ಫಸ್ಟ್ ಫ್ಲೋರ್‌ನಲ್ಲಿ ಅಡ್ಮಿನಿಸ್ಟ್ರೇಷನ್ ಬಿಲ್ಡಿಂಗ್ ಹೀಗೆ ಒಂದೊಂದಕ್ಕೆ ಒಂದೊಂದು ಫ್ಲೋರ್ ಒದಗಿಸಲಾಗಿದೆ.
ಇನ್ನು ಮಹಿಳೆಯರಿಗಾಗಿ ಸಹಾಯ ಕೇಂದ್ರ, ವಿಚಾರಣೆ ಕೇಂದ್ರ, ಮಹಿಳೆಯರಿಗೆ ಸಪರೇಟ್ ಲಾಕ್‌ಅಪ್, ರೆಸೆಪ್ಷನ್, ಪುರುಷರಿಗೆ ಸಪರೇಟ್ ಲಾಕ್‌ಅಪ್, ಸಪರೇಟ್ ಬಾತ್‌ರೂಂಗಳು, ಕುಡಿಯುವ ನೀರಿನ ವ್ಯವಸ್ಥೆ ಇದೆ. ಇಷ್ಟೇ ಅಲ್ಲದೆ ಅಡುಗೆ ಮನೆ, ಸಬ್‌ಇನ್ಸ್‌ಪೆಕ್ಟರ್ ಕ್ಯಾಬಿನ್, 40 ಕಾನ್ಸ್‌ಟೇಬಲ್‌ಗಳ ಸಾಮರ್ಥ್ಯದ ಪ್ರತ್ಯೇಕ ಬ್ಯಾರಕ್‌ಗಳಿವೆ. ಹೊರಗಿನಿಂದ ನೋಡೋದಕ್ಕೆ ಫೈವ್ ಸ್ಟಾರ್ ಹೊಟೇಲ್ ಅಥವಾ ಐಶಾರಾಮಿ ಮದುವೆ ಹಾಲ್ ರೀತಿ ಪೊಲೀಸ್ ಠಾಣೆ ಕಾಣುತ್ತದೆ.
ಪೊಲೀಸ್ ಸ್ಟೇಷನ್‌ನಲ್ಲಿ ಕೆಲಸ ಇದ್ದವರಷ್ಟೇ ಅಲ್ಲ, ಏನೂ ಕೆಲಸ ಇಲ್ಲದಿದ್ದರೂ ಪೊಲೀಸ್ ಸ್ಟೇಷನ್ ನೋಡೋಕೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಬ್ಲಾಗ್, ಯುಟ್ಯೂಬ್ ಚಾನೆಲ್‌ಗಳಿಗಾಗಿ ವಿಡಿಯೋ ಮಾಡುತ್ತಾ ಸ್ಟೇಷನ್‌ನಲ್ಲಿ ಜನ ಅಲೆದಾಡುತ್ತಿರೋದನ್ನು ಕಾಣಬಹುದಾಗಿದೆ.