ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಕ್ರಿಕೆಟ್‌ಗೆ ದೊಡ್ಡ ಹಿನ್ನಡೆ ಎದುರಾಗಿದೆ. ಯುಎಸ್‌ಎ ತಂಡದ ಪ್ರಮುಖ ಬ್ಯಾಟರ್ ಆರೋನ್ ಜೋನ್ಸ್ ಅವರನ್ನು ಐಸಿಸಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. 2023–24ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಬಿಮ್10 ಟೂರ್ನಮೆಂಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಐಸಿಸಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಜೋನ್ಸ್ ವಿರುದ್ಧ ಒಟ್ಟು ಐದು ಉಲ್ಲಂಘನೆ ಆರೋಪಗಳಿದ್ದು, ಅವುಗಳಲ್ಲಿ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಂಬಂಧಿಸಿದವು. ಪಂದ್ಯ ಫಿಕ್ಸಿಂಗ್‌ನಲ್ಲಿ ಭಾಗವಹಿಸಿದ್ದ ಶಂಕೆ, ಭ್ರಷ್ಟಾಚಾರ ಸಂಬಂಧಿತ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ವರದಿ ಮಾಡದಿರುವುದು ಹಾಗೂ ತನಿಖೆಗೆ ಪೂರ್ಣ ಸಹಕಾರ ನೀಡದಿರುವುದು ಪ್ರಮುಖ ಆರೋಪಗಳಾಗಿವೆ.
ಇದನ್ನೂ ಓದಿ:
ಈ ಪ್ರಕರಣವು ಇನ್ನೂ ತನಿಖೆಯ ಹಂತದಲ್ಲಿರುವುದರಿಂದ, ಅಂತಿಮ ತೀರ್ಪು ಬರುವವರೆಗೆ ಜೋನ್ಸ್ ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಆರೋಪಗಳಿಗೆ ಉತ್ತರ ನೀಡಲು ಅವರಿಗೆ ಜನವರಿ 28, 2026ರಿಂದ 14 ದಿನಗಳ ಗಡುವು ನೀಡಲಾಗಿದೆ.



