ಕೆಂಪು ಕೋಟೆಯಲ್ಲಿ ಸತತ 12ನೇ ಬಾರಿಗೆ ಧ್ವಜಾರೋಹಣ, 103 ನಿಮಿಷಗಳ ಕಾಲ ಸುದೀರ್ಘ ಭಾಷಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕೆಂಪು ಕೋಟೆಯಲ್ಲಿ ಸತತ 12ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ಕೆಂಪು ಕೋಟೆಯಲ್ಲಿ 103 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿ ಹಲವು ದಾಖಲೆಗಳನ್ನ ಮುರಿದಿದ್ದಾರೆ.

ಸತತ 12ನೇ ಬಾರಿಗೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದು, ಈ ಮೂಲಕ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. 1966ರ ಜನವರಿಯಿಂದ 1977ರ ಮಾರ್ಚ್‌ ವರೆಗೆ ಹಾಗೂ 1980ರ ಜನವರಿಯಿಂದ 1984ರ ಅಕ್ಟೋಬರ್‌ ವರೆಗೆ ಅಧಿಕಾರದಲ್ಲಿದ್ದ ಇಂದಿರಾ ಗಾಂಧಿ, ಒಟ್ಟು 16 ಬಾರಿ ಹಾಗೂ ಸತತ 11 ಸಲ ಧ್ವಜಾರೋಹಣ ಭಾಷಣ ಮಾಡಿದ್ದರು. ಇದೀಗ ಸತತ 12ನೇ ಭಾಷಣ ಮಾಡಿರುವ ಪ್ರಧಾನಿ ಮೋದಿ ಅವರು, ಸತತ 17 ಬಾರಿ ಧ್ವಜಾರೋಹಣ ಭಾಷಣ ಮಾಡಿದ ನೆಹರೂ ನಂತರದ ಸ್ಥಾನದಲ್ಲಿದ್ದಾರೆ.

ಮೊದಲಿಗೆ 103 ನಿಮಿಷಗಳ ಕಾಲ ಭಾಷಣ, ಮೋದಿಯವರ ಅತಿ ದೊಡ್ಡ ಸ್ವಾತಂತ್ರ್ಯ ದಿನಾಚರಣೆಯ ಭಾಷಣವಾಗಿದ್ದು, ಕಳೆದ ವರ್ಷ ಅವರೇ ಮಾಡಿದ್ದ 98 ನಿಮಿಷಗಳ ಭಾಷಣದ ದಾಖಲೆಯನ್ನ ಹಿಂದಿಕ್ಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!