August 12, 2026
Wednesday, August 12, 2026
spot_img

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಹಾರ್ಮುಜ್ ಜಲಸಂಧಿಗೆ ಭಾರತೀಯ ನಾವಿಕರ ಪ್ರವೇಶ ನಿಷೇಧಿಸಿದ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಎನಿಸಿರುವ ಪರ್ಷಿಯನ್ ಗಲ್ಫ್ ಹಾಗೂ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಸಂಚರಿಸುವ ಹಡಗುಗಳಲ್ಲಿ ಭಾರತೀಯ ಸಿಬ್ಬಂದಿಯನ್ನು ನಿಯೋಜಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಳೆದ ಮೂರು ದಿನಗಳಲ್ಲಿ ನಡೆದ ಭೀಕರ ದಾಳಿಗಳಲ್ಲಿ ಇಬ್ಬರು ಭಾರತೀಯ ನಾವಿಕರು ದುರಂತ ಅಂತ್ಯ ಕಂಡ ಬೆನ್ನಲ್ಲೇ ನೌಕಾಯಾನ ನಿಯಂತ್ರಣ ಸಂಸ್ಥೆಯು ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

ಸುರಕ್ಷತೆಗಾಗಿ ಜಾರಿಯಾದ DGMA ತುರ್ತು ಆದೇಶ

ಭಾರತೀಯ ನೌಕಾಯಾನ ನಿಯಂತ್ರಣದ ಸರ್ವೋಚ್ಚ ಸಂಸ್ಥೆಯಾದ ‘ಡೈರೆಕ್ಟರೇಟ್ ಜನರಲ್ ಆಫ್ ಮ್ಯಾರಿಟೈಮ್ ಅಡ್ಮಿನಿಸ್ಟ್ರೇಷನ್’ (DGMA) ಬುಧವಾರ ಪ್ರಮುಖ ಆದೇಶವೊಂದನ್ನು ಹೊರಡಿಸಿದೆ. ಮುಂದಿನ ಸೂಚನೆ ಬರುವವರೆಗೂ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಯಾವುದೇ ಸರಕು ಸಾಗಣೆ ಹಡಗುಗಳಲ್ಲಿ ಭಾರತೀಯ ಮೂಲದ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಶಿಪ್ಪಿಂಗ್ ಕಂಪನಿಗಳಿಗೆ ತಿಳಿಸಿದೆ.

ಅಪಾಯದ ವಲಯದಲ್ಲಿರುವ ಹಡಗುಗಳ ಪಟ್ಟಿ ಬಿಡುಗಡೆ

ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ DGMA, ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಇರುವ ಸಮುದ್ರ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಮೊಂಬಾಸಾ ಬಿ, ಅಲ್ ಬಹ್ಯಾ, ಜಿಎಫ್ಎಸ್ ಗ್ಯಾಲಕ್ಸಿ, ಎಂಟಿ ವೆದ್ಯಾನ್ ಮತ್ತು ಅಲ್ ರೇಖಾಯತ್ ನಂತಹ ಪ್ರಮುಖ ವಾಣಿಜ್ಯ ಹಡಗುಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ಎಚ್ಚರಿಸಿದೆ. ಹೀಗಾಗಿ, ನಮ್ಮ ನಾವಿಕರ ಪ್ರಾಣರಕ್ಷಣೆ ಮತ್ತು ಯೋಗಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ಈ ಮುನ್ನೆಚ್ಚರಿಕೆ ಹೆಜ್ಜೆಯನ್ನು ಇಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !