ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ಧದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಭಾನುವಾರ 50 ವಿಮಾನಗಳ ಹಾರಾಟ ರದ್ದಾಗಿದೆ.
ರದ್ದಾದ 50 ವಿಮಾನಗಳಲ್ಲಿ 22 ಆಗಮನಗಳು ಮತ್ತು 28 ನಿರ್ಗಮನಗಳಾಗಿವೆ. ಭಾನುವಾರ ಸಂಜೆ 6 ಗಂಟೆಯ ಹೊತ್ತಿಗೆ ಅಂಕಿ ಅಂಶಗಳನ್ನು ದಾಖಲಿಸಲಾಗಿದೆ.
ದುಬೈ, ಅಬುಧಾಬಿ, ದೋಹಾ, ರಿಯಾದ್, ಜೆಡ್ಡಾ ಮತ್ತು ದಮ್ಮಾಮ್‍ಗೆ ಹೋಗುವ ವಿಮಾನಗಳು ಹೆಚ್ಚು ಪರಿಣಾಮ ಬೀರಿವೆ. ಈ ಮಾರ್ಗಗಳು ಒಟ್ಟಾಗಿ ಬೆಂಗಳೂರು ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಸಂಚಾರದ ಗಮನಾರ್ಹ ಪಾಲನ್ನು ಹೊಂದಿವೆ.
ಇರಾನ್-ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ನಂತರ ಹಾರಾಟ ಆರಂಭವಾಗಿದೆ, ಆದರೆ ಅಷ್ಟೊತ್ತಿಗಾಗಲೇ ಭಾನುವಾರ ಸಂಜೆ ಆಗಿದ್ದು, ಅಡಚಣೆ ಮುಂದುವರಿದಿದೆ.



