April 28, 2026
Tuesday, April 28, 2026
spot_img

ರೀಲ್ಸ್ ಲೋಕದ ‘ಅಜ್ಜಿ’ ಇನ್ನಿಲ್ಲ: ಸೋಷಿಯಲ್ ಮೀಡಿಯಾ ತಾರೆ ಲಕ್ಷ್ಮಿ ನಾಯ್ಕ್ ನಿಧನ

ಹೊಸದಿಗಂತ ಯಲ್ಲಾಪುರ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಗ್ಧ ನಟನೆ ಹಾಗೂ ಚಟುವಟಿಕೆಯಿಂದ ಮನೆಮಾತಾಗಿದ್ದ ‘ರೀಲ್ಸ್ ಅಜ್ಜಿ’ ಲಕ್ಷ್ಮಿ ನಾಯ್ಕ್ (93) ಅವರು ಇಂದು ಮಂಚಿಕೇರಿಯ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಸೂರಜ್ ಅವರ ಮುತ್ತಜ್ಜಿಯಾದ ಲಕ್ಷ್ಮಿ ನಾಯ್ಕ್, ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದರು.

ಸೂರಜ್ ಜೊತೆಗೂಡಿ ಅವರು ಮಾಡುತ್ತಿದ್ದ ರೀಲ್ಸ್‌ಗಳು ಲಕ್ಷಾಂತರ ಜನರ ಮುಖದಲ್ಲಿ ನಗು ಮೂಡಿಸಿದ್ದವು. ಅವರ ಪ್ರತಿಯೊಂದು ಹಾವಭಾವ ಮತ್ತು ಉತ್ಸಾಹ ಯುವಜನತೆಗೂ ಮಾದರಿಯಾಗಿತ್ತು.

ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !