ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂನಾರ್‌ನಲ್ಲಿ ಕಾಡಾನೆಯೊಂದರ ಮುಂದೆ ನಿಂತು ಪ್ರವಾಸಿಗರೋರ್ವರು ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಿಗೇ ಈ ಬೆಳವಣಿಗೆಗಳ ಬಗ್ಗೆ ಸ್ಥಳೀಯರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಲ್ಲಿಗೆ ಬರುವ ಪ್ರವಾಸಿಗರು ಈ ರೀತಿ ವರ್ತಿಸಿ ಕಾಡಾನೆಗಳನ್ನು ಕೆರಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು ಈ ಬಗ್ಗೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆನೆಗಳನ್ನು ಹಿಂಬಾಲಿಸುವುದು, ಪಕ್ಕದಲ್ಲಿಯೇ ನಿಂತು ಪೋಟೋ ತೆಗೆಯುವುದು, ಅವುಗಳ ದಂತ ಮುಟ್ಟಲೆತ್ನಿಸಿ ಓಡುವುದು ಮುಂತಾದ ಕೃತ್ಯಗಳನ್ನು ಪ್ರವಾಸಿಗರು ಮಾಡುತ್ತಿದ್ದಾರೆ. ಇದರಿಂದ ಸಿಟ್ಟಿಗೇಳುವ ಆನೆಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.