ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ 650ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ.
ಇದೀಗ ಬಾಂಗ್ಲಾದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆದರೆ, ಈ ಪರಿಸ್ಥಿತಿ ಉಂಟಾಗಲು ಭಾರತವೇ ಮುಖ್ಯ ಕಾರಣ ಎಂದು ಆರೋಪಿಸಿ ನೆರೆಯ ದೇಶ ಹೊಸ ಕ್ಯಾತೆ ತೆಗೆದಿದೆ.
ಭಾರತವು ಬಾಂಗ್ಲಾದೇಶ ವಿರೋಧಿ ನೀತಿ ಅನುಸರಿಸಿ ಡ್ಯಾಂನಿಂದ ದಿಢೀರನೆ ನೀರು ಬಿಟ್ಟಿದ್ದರಿಂದ ನಮ್ಮ ದೇಶ ಪ್ರವಾಹದಲ್ಲಿ ಮುಳುಗುತ್ತಿದೆ. ಪುರಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿರುವುದರಿಂದ ಪ್ರವಾಹ ಉಂಟಾಗಿದೆ ಎಂದು ಆರೋಪಿಸಿದೆ .
ಇದಕ್ಕೆ ತಿರುಗೇಟು ನೀಡಿರುವ ಭಾರತ, ನಿಮ್ಮ ದೇಶದಲ್ಲಿ ಹೆಚ್ಚಿನ ಮಳೆಯಾದ ಕಾರಣ ಪ್ರವಾಹವಾಗಿದೆಯೇ ಹೊರತು ನಮ್ಮಿಂದಲ್ಲ. ಈ ರೀತಿಯ ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ತಿರುಗೇಟು ನೀಡಿದೆ.
ಈ ಕುರಿತು ಮಾತನಾಡಿರುವ ಭಾರತೀಯ ಹೈ ಕಮಿಷನರ್ ಪ್ರಣಯ್ ವರ್ಮಾ, ಬಾಂಗ್ಲಾ ಸರ್ಕಾರದ ಹಂಗಾಮಿ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಸಹಕಾರವನ್ನು ಪುನರುಚ್ಚರಿಸಿದ್ದಾರೆ.
ಬಾಂಗ್ಲಾದೇಶದ ಜಿಲ್ಲೆಗಳಲ್ಲಿ ಪ್ರವಾಹವು ಭಾರೀ ಮಳೆಯಿಂದ ಉಂಟಾಗಿದೆಯೇ ಹೊರತು ತ್ರಿಪುರಾದ ಗುಮ್ಟಿ ನದಿಯ ಮೇಲಿನ ಡಂಬೂರ್ ಅಣೆಕಟ್ಟಿನಿಂದ ಬಿಡುಗಡೆಯಾದ ನೀರಿನಿಂದಲ್ಲ. ತಪ್ಪಾದ ಮಾಹಿತಿಯನ್ನು ಹರಡಿಬೇಡಿ. ತ್ರಿಪುರಾದ ಗುಮ್ಟಿ ನದಿಯ ಮೇಲ್ಭಾಗದ ದುಂಬೂರು ಅಣೆಕಟ್ಟನ್ನು ತೆರೆಯುವ ಮೂಲಕ ಬಾಂಗ್ಲಾದೇಶದ ಪೂರ್ವ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಪ್ರಸ್ತುತ ಪ್ರವಾಹದ ಪರಿಸ್ಥಿತಿ ಉಂಟಾಗಿದೆ ಎಂದು ಬಾಂಗ್ಲಾದೇಶದಲ್ಲಿ ಕಳವಳ ವ್ಯಕ್ತಪಡಿಸುವುದನ್ನು ನಾವು ನೋಡಿದ್ದೇವೆ. ಇದು ವಾಸ್ತವಿಕವಾಗಿ ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.
ಬಾಂಗ್ಲಾದೇಶದ ಆರು ಜಿಲ್ಲೆಗಳಲ್ಲಿ ಸುಮಾರು 18 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಎಂಟು ಜಿಲ್ಲೆಗಳಲ್ಲಿ 3 ಮಿಲಿಯನ್ ಜನರು ಸಿಲುಕಿಕೊಂಡಿದ್ದಾರೆ.