ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪೇನ್‌ನಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಜನ ತತ್ತರಿಸಿದ್ದಾರೆ. ಅನೇಕ ನಗರಗಳು ಮಳೆ ನೀರಿನಿಂದ ಮುಳುಗಿವೆ. ಈಶಾನ್ಯ ಸ್ಪ್ಯಾನಿಷ್ ನಗರವಾದ ಜರಗೋಜಾದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಇಲ್ಲಿ ಕಾರುಗಳು ರಸ್ತೆಗಳಲ್ಲಿ ಗೊಂಬೆಗಳಂತೆ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಇಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಹಠಾತ್ ಪ್ರವಾಹದಿಂದಾಗಿ ಕೆಲವು ಚಾಲಕರು ತಮ್ಮ ಕಾರುಗಳಲ್ಲಿ ಸಿಲುಕಿಕೊಂಡರು. ಈ ವೇಳೆ ಎಲ್ಲಿಗೂ ಹೋಗದಂತೆ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಅಲ್ಲಿನ ಹವಾಮಾನ ಇಲಾಖೆ ಪ್ರಕಾರ, ಈಶಾನ್ಯ ಸ್ಪೇನ್‌ನಲ್ಲಿ ಇಂದು ಕೂಡ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿಂದಾಗಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಮಳೆಯ ನಂತರ ಹಲವು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ.