ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈ, ಪುಣೆ ಸೇರಿದಂತೆ ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾಮಳೆಗೆ ಪುಣೆಯಲ್ಲಿ 6 ಮಂದಿ ಬಲಿಯಾಗಿದ್ದಾರೆ.
ವಿದ್ಯುತ್ ಅವಘಡದಿಂದ ಮೂವರು, ಥಾಣೆಯ ಬಾರ್ವಿ ಅಣೆಕಟ್ಟೆಗೆ ಬಿದ್ದು ಇಬ್ಬರು ಮುಳುಗಿ ಸಾವಿಗೀಡಾಗಿದ್ದಾರೆ. ಭಾರೀ ಮಳೆಯಿಂದಾಗಿ ಮುಂಬೈ ಮತ್ತು ಪಾಲ್ಘರ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ವೀಕ್ಷಣಾಲಯವು ಈ ತಿಂಗಳಿನಲ್ಲಿ ಇದುವರೆಗೆ 1,500 ಮಿಮೀ ಮಳೆಯನ್ನು ದಾಖಲಿಸಿದೆ. ನಗರದ ಇತಿಹಾಸದಲ್ಲೇ 2ನೇ ಬಾರಿಗೆ ಅತಿ ಹೆಚ್ಚು ಮಳೆಯಾದಂತಾಗಿದೆ. ಕಳೆದ ಜುಲೈನಲ್ಲಿ ನಗರದಲ್ಲಿ 1,771 ಮಿಮೀ ನಷ್ಟು ಮಳೆಯಾಗಿತ್ತು.