ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮುಂದಿನ ತಿಂಗಳು ಹಸೆಮಣೆ ಏರಲಿದ್ದಾರೆ. ಜೈಪುರದಲ್ಲಿ ನಡೆಯುವ ಅದ್ಧೂರಿ ಮದುವೆಗೆ ಬೆಂಗಳೂರಿನಿಂದ ಹೂವುಗಳನ್ನು ತರಲಾಗುತ್ತಿದೆಯಂತೆ!
ಭಾರತ ಮತ್ತು ವಿಶ್ವದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮಗಳಿಗೆ ಬೆಂಗಳೂರಿನಿಂದ ಹೂಗಳನ್ನು ಕಳುಹಿಸಲಾಗುತ್ತದೆ. ಅದರಲ್ಲೂ ಫೆಬ್ರವರಿಯಲ್ಲಿ ಹೂಗಳಿಗೆ ಬಹಳ ಬೇಡಿಕೆಯಿದೆ. ಈಗ ತಾರಾ ಜೋಡಿಯ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಮದುವೆ ಮನೆಯಲ್ಲಿ ಬೆಂಗಳೂರಿನ ಹೂಗಳು ನಳನಳಿಸಲಿದೆ.
ಕರ್ನಾಟಕದ ಭಾರತದ ಅತಿದೊಡ್ಡ ಪುಷ್ಪಕೃಷಿ ಕೇಂದ್ರವಾಗಿದ್ದು ಜನವರಿ ಮತ್ತು ಫೆಬ್ರವರಿ ನಡುವಿನ ಕೇವಲ 45 ದಿನಗಳಲ್ಲಿ ಸುಮಾರು 1,000 ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿದೆ ಎನ್ನಲಾಗಿದೆ.
ಅಕ್ಟೋಬರ್ 3, 2025 ರಂದು ವಿಜಯ್ ದೇವರಕೊಂಡ ಅವರ ಹೈದರಾಬಾದ್ ಮನೆಯಲ್ಲಿ ಜೋಡಿಯ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರ ಪ್ರೀತಿಪಾತ್ರರು, ಕುಟುಂಬದವರು ಮಾತ್ರ ಭಾಗಿಯಾಗಿದ್ದರು.



