August 13, 2026
Thursday, August 13, 2026
spot_img

SKIN CARE | ಬಿಸಿಲಿಗೆ ಮುಖ ಡಲ್‌ ಆಗಿ ಕಾಣ್ತಿದ್ಯಾ? ಈ ಕೆಲಸಗಳನ್ನು ಮಾಡಿ ನೋಡಿ..

ಬೇಸಿಗೆಯಲ್ಲಿ ಮುಖ ಟ್ಯಾನ್‌ ಆಗಿ ಕಪ್ಪಾಗುತ್ತದೆ. ಹೀಗೆ ಆದಾಗ ಟ್ಯಾನ್‌ ಹೋಗಿ ಗ್ಲೋ ವಾಪಾಸ್‌ ಬರುವುದಕ್ಕೆ ತುಂಬಾನೇ ಸಮಯ ಬೇಕಾಗುತ್ತದೆ. ಆದರೆ ಈ ರೀತಿ ಆಗಬಾರದು ಎಂದರೆ ಸ್ಕಿನ್‌ ಕೇರ್‌ ಮಾಡಿ.

ಯಾವ ರೀತಿ ನೋಡಿ…

ಸನ್‌ಸ್ಕ್ರೀನ್‌ ಹಚ್ಚೋದಾ ಬೇಡವಾ? ಅನ್ನೋ ಡೌಟ್‌ ಬೇಡ. ಹಚ್ಚಲೇಬೇಕು. ಮನೆಬಿಡುವ ಅರ್ಧಗಂಟೆ ಮುನ್ನವೇ ಸನ್‌ಸ್ಕ್ರೀನ್‌ ಹಚ್ಚಿಬಿಡಿ.

ಹೆವಿಯಾದ ಮೇಕಪ್‌ ಹಾಗೂ ಅತಿಯಾದ ಮೇಕಪ್‌ ಪ್ರಾಡಕ್ಟ್‌ಗಳ ಬಳಕೆ ಕಡಿಮೆಮಾಡಿ. ಲೈಟ್‌ವೇಟ್‌ ಆದ ಮಾಯಿಶ್ಚರೈಸರ್‌ಗಳನ್ನು ಬಳಕೆ ಮಾಡಿ.

ಬೇಸಿಗೆಯಲ್ಲಿ ಚರ್ಮ ಚೆನ್ನಾಗಿ ಕಾಣಬೇಕು ಅಂದ್ರೆ ನೀವು ಮಾಡೋ ಮೇಕಪ್‌ ಮುಖ್ಯವಲ್ಲ. ಚರ್ಮವನ್ನು ನೀವು ಹೇಗೆ ಇಟ್ಟುಕೊಂಡಿದ್ದೀರಿ? ದೇಹದಲ್ಲಿ ನೀರಿನ ಅಂಶ ಇದೆಯಾ ಅನ್ನೋದು ಮುಖ್ಯ. ಹೆಚ್ಚು ನೀರು ಕುಡಿಯಿರಿ.

ವಿಟಮಿನ್‌ ಸಿ, ವಿಟಮಿನ್‌ ಇ ಇನ್ನಿತರ ಆಂಟಿಆಕ್ಸಿಡೆಂಟ್‌ಗಳಿರುವ ಸೆರಮ್‌ ಬಳಕೆ ಮಾಡಿ.

ಮುಖದಷ್ಟೇ ತುಟಿಗಳು ಮುಖ್ಯ. ಹೀಗಾಗಿ ಎಸ್‌ಪಿಎಫ್‌ ಇರುವ ಲಿಪ್‌ಬಾಮ್‌ಗಳನ್ನು ಬಳಕೆ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !