ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿರುವ ಎಫ್ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಮಹಿಳೆಯ ಕೈಲಿದ್ದ ವಜ್ರದ ಉಂಗುರ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಉಂಗುರ ಕಾಣೆಯಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದ್ದಕ್ಕೆ ಸಿಬ್ಬಂದಿ, ಆಕೆ ವಿರುದ್ಧ ಅಸಭ್ಯವಾಗಿ ಉತ್ತರಿಸಿದ್ದಾರೆ. ಇದರಿಂದ ಸಂತ್ರಸ್ತ ಮಹಿಳೆ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ನಿಜವಾದ ಸಂಗತಿ ಬೆಳಕಿಗೆ ಬಂದಿದೆ.
ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಜೂನ್ 27ರಂದು ಜುಬ್ಲಿ ಹಿಲ್ಸ್ನಲ್ಲಿರುವ ಎಫ್ಎಂಎಸ್ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆಯ ಸಮಯದಲ್ಲಿ ರೂ. 50 ಲಕ್ಷ ಮೌಲ್ಯದ ವಜ್ರವನ್ನು ಟೇಬಲ್ ಮೇಲೆ ಬಿಚ್ಚಿಟ್ಟು ಮರೆತು ಮನೆಗೆ ಹೋದರು. ನಂತರ ನೆನಪಿಗೆ ಬಂದ ಕೂಡಲೇ ಅವಸರದಿಂದ ಆಸ್ಪತ್ರೆಗೆ ಬಂದು ವಿಷಯ ತಿಳಿಸಿ ತನ್ನ ಉಂಗುರ ಸಿಕ್ಕಿದ್ದರೆ ಕೊಡುವಂತೆ ಕೇಳಿದ್ದಾರೆ. ಅವರ್ಯಾರೂ ಸರಿಯಾಗಿ ಸ್ಪಂದಿಸದೆ, ಬೇಜಾವಾಬ್ದಾರಿಯಿಂದ ವರ್ತಿಸಿದ್ದಾರೆ. ಅಸಭ್ಯ ಉತ್ತರ ನೀಡಿದ್ದರಿಂದ ಸಂತ್ರಸ್ತೆ ಜುಬಿಲಿ ಹಿಲ್ಸ್ ಪೊಲೀಸರ ಮೊರೆ ಹೋಗಿದ್ದಾರೆ.
ಇದರಿಂದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಟಿಶ್ಯೂ ಪೇಪರ್ನಲ್ಲಿ ಸುತ್ತಿದ ಉಂಗುರವನ್ನು ಯಾರೋ ತನ್ನ ಪರ್ಸ್ನಲ್ಲಿ ಹಾಕಿದ್ದು, ಭಯದಿಂದ ಅದನ್ನು ಟಾಯ್ಲೆಟ್ ಕಮೋಡ್ನಲ್ಲಿ ಎಸೆದಿರುವುದಾಗಿ ಸಿಬ್ಬಂದಿ ಉತ್ತರಿಸಿದ್ದಾರೆ. ಶೌಚಾಲಯದ ಕಮೋಡ್ ಹಾಗೂ ಪೈಪ್ ಲೈನ್ ಗಳನ್ನು ತೆಗೆದು ನೋಡಿದಾಗ ಉಂಗುರ ಪತ್ತೆಯಾಗಿದೆ. ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.