ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇವು ತಿಂದವರು ಜೈಲಿನಲ್ಲಿದ್ದಾರೆ. ಈಗ ಪೇಪರ್ ತಿಂದವರು ಜೈಲಿಗೆ ಹೋಗುತ್ತಾರೆ ಎಂದು ಸಿ.ಟಿ.ರವಿ ಭವಿಷ್ಯ ನುಡಿದರು.
ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಸಂವಿಧಾನಕ್ಕಿಂತ ಮೇಲ್ಪಟ್ಟವರಾ? ಕಾಂಗ್ರೆಸ್ನವರಿಗೆ ಭಯ ಯಾಕೆ? ಹಗರಣಗಳ ಸರದಾರ ಕಾಂಗ್ರೆಸ್ ಪಕ್ಷ. ಕಾಲಿನಿಂದ ತಲೆಯವರೆಗೂ ಹಗರಣ ಹೊದ್ದುಕೊಂಡಿರುವುದು ಕಾಂಗ್ರೆಸ್ ಎಂದು ಟೀಕಿಸಿದರು.
ಇಂಡಿಯನ್ ಆಯಿಲ್ ಸ್ಕ್ಯಾಮ್, 2ಜಿ ಸ್ಪೆಕ್ಟ್ರಂ, ಆಗಸ್ಟಾ ವೆಸ್ಟ್ಲ್ಯಾಂಡ್, ಕೆಜಿ ಬೇಸಿನ್ ಹಗರಣವನ್ನು ಕಾಂಗ್ರೆಸ್ ಮಾಡಿದೆ. ಇದೀಗ ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರಿಗಳೇ ಬೆಂಬಲ ಕೊಡುತ್ತಿದ್ದಾರೆ. ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಕಾಂಗ್ರೆಸ್ನವರು ಬೀದಿಗಿಳಿದಿದ್ದಾರೆ. ಗಾಂಧಿ ಕುಟುಂಬದ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದೆ ಎಂದರು.
ಆಲೂಗಡ್ಡೆಯಲ್ಲಿ ಚಿನ್ನ ತೆಗೆಯೋದು ಹೇಗೆ ಅಂತ ರಾಹುಲ್ ಗಾಂಧಿ ಹೇಳಿದ್ದರು. 50 ಲಕ್ಷ ಹಾಕಿ ಸಾವಿರಾರು ಕೋಟಿ ಹಣ ಪಡೆಯೋದು ಎಂಬ ಬಗ್ಗೆ ಪಾಠ ಮಾಡಿದ್ದರು. ಇನ್ನೊಬ್ಬರು ಕೃಷಿ ಮಾಡಿ ಆಸ್ತಿ ಮಾಡಿದವರು. ಇದೀಗ ಅವರು ಬೇಲ್ ಮೇಲೆ ಹೊರಗಿದ್ದಾರೆ. ದಿನವೂ ಕೃಷಿ ಮಾಡುವ ರೈತರು ಕಷ್ಟದಲ್ಲಿದ್ದಾಗ ಇವರು ಮಾತ್ರ ಕೃಷಿಯಲ್ಲಿ ಸಾವಿರಾರು ಕೋಟಿ ಹಣ ಗಳಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.